ತುಂಗಭದ್ರಾ ನದಿ ದಂಡೆಯಲ್ಲಿ ನಡೆದಾಡುವ ಪೈಂಟೆಡ್ ಸ್ಟೋರ್ಕ್ಸ್ ಮತ್ತು ಸ್ಪರ್ ಫೌಲ್ ಪಕ್ಷಿಗಳು 
ರಾಜ್ಯ

ಹಂಪಿಯಲ್ಲಿ ಜನವರಿಯಲ್ಲಿ ಮೂರು ದಿನಗಳ ಪಕ್ಷಿಗಳ ಹಬ್ಬ

ಕರ್ನಾಟಕ ಹಕ್ಕಿ ಹಬ್ಬ(Bird Festival)ದ ಮೂರನೇ ಆವೃತ್ತಿ ಹಂಪಿಯಲ್ಲಿ ನಡೆಯಲಿದೆ. ಹಂಪಿ ಸುತ್ತಮುತ್ತಲ ಹಕ್ಕಿಗಳ ವಾಸಸ್ಥಾನ...

ಹುಬ್ಬಳ್ಳಿ: ಕರ್ನಾಟಕ ಹಕ್ಕಿ ಹಬ್ಬ(Bird Festival)ದ ಮೂರನೇ ಆವೃತ್ತಿ ಹಂಪಿಯಲ್ಲಿ ನಡೆಯಲಿದೆ.ಹಂಪಿ ಸುತ್ತಮುತ್ತಲ ಹಕ್ಕಿಗಳ ವಾಸಸ್ಥಾನ ಮತ್ತು ಬಳ್ಳಾರಿ ಜಿಲ್ಲೆಯ ದರೋಜಿ ಸ್ಲೋತ್ ಬೇರ್ ಪಕ್ಷಿಧಾಮಗಳಲ್ಲಿ ಮೂರು ದಿನಗಳ ಹಬ್ಬ ಜನವರಿ ಮೊದಲ ವಾರದಲ್ಲಿ ನಡೆಯಲಿದೆ.
ಈ ಹಿಂದಿನ ಎರಡು ಆವೃತ್ತಿಗಳನ್ನು ಅರಣ್ಯ ಇಲಾಖೆ ಮತ್ತು ಪರಿಸರ ಪ್ರವಾಸೋದ್ಯಮ ನಿಗಮ ರಂಗನತಿಟ್ಟು ಮತ್ತು ಕಾಳಿ ಹುಲಿ ಮೀಸಲು ಅರಣ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿತ್ತು. ಮೂರನೇ ಆವೃತ್ತಿಯನ್ನು ಗದಗ್ ಸಮೀಪ ಮಾಗಡಿ ಟಾಂಕ್ ಬಳಿ ನಡೆಸಲು ಯೋಜಿಸಲಾಗಿತ್ತು, ಆದರೆ ಇಲ್ಲಿನ ಕೊಳಗಳಲ್ಲಿ ಕಡಿಮೆ ನೀರು ಇರುವುದರಿಂದ ಹಬ್ಬಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಸ್ಥಳವನ್ನು ಬದಲಾಯಿಸಲಾಯಿತು ಎಂದು ವನ್ಯಮೃಗ ಅರಣ್ಯಗಳ ಪ್ರಧಾನ ಮುಖ್ಯ ರಕ್ಷಣಾಧಿಕಾರಿ ಬಿ.ಜೆ.ಹೊಸ್ಮಟ್ ಹೇಳುತ್ತಾರೆ.
ಹಬ್ಬದ ಸಂದರ್ಭದಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ದರೋಜಿ ಪಾರ್ಕ್ ನ ಕಮಲಾಪುರ ಮುಖ್ಯ ಕೇಂದ್ರವಾಗಲಿದೆ. ಪಕ್ಷಿಗಳ ಮತ್ತು ಪಕ್ಷಿ ವಿಜ್ಞಾನಿಗಳ ಜೊತೆ ಹಂಪಿಯ ನದಿಯುದ್ದಕ್ಕೂ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೊಸ್ಮಟ್ ತಿಳಿಸಿದರು.
ಹಂಪಿ, 14ನೇ ಶತಮಾನದಲ್ಲಿ ಪ್ರಮುಖ ರಾಜರುಗಳು ಆಳಿದ ಐತಿಹಾಸಿಕ ನಗರ ಮಾತ್ರವಲ್ಲದೆ ಇಲ್ಲಿ ಅನೇಕ ಪಕ್ಷಿ ಪ್ರಬೇಧಗಳಿವೆ. ಹಂಪಿ ಮೂಲಕ ಹಾದುಹೋಗುವ ತುಂಗಭದ್ರಾ ನದಿ ಪಕ್ಷಿಗಳಿಗೆ ಮತ್ತು ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವವರಿಗೆ ಮುಖ್ಯ ಆಕರ್ಷಣೆಯಾಗಿದೆ. ಹಳದಿ ಬಣ್ಣದ ಗಂಟಲನ್ನು ಹೊಂದಿರುವ ಬುಲ್ ಬುಲ್ ಹಕ್ಕಿ, ಸ್ಯಾಂಡ್ ಗ್ರೌಸ್ ಮೊದಲಾದವು ಹಂಪಿ ಮತ್ತು ದರೊಜಿಯಲ್ಲಿ ಕಾಣಸಿಗುವ ಕೆಲವು ಅಪರೂಪದ ಹಕ್ಕಿಗಳಾಗಿವೆ.
ಬಳ್ಳಾರಿಯ ಪಕ್ಷಿಗಳ ಕುರಿತು ಪುಸ್ತಕ ಬರೆಯುವ ಲೇಖಕ, ಪರಿಸರವಾದಿ ಸಮದ್ ಕೊಟುರ್, ಹಂಪಿಯಲ್ಲಿ ಪಕ್ಷಿಗಳ ಹಬ್ಬ ನಡೆಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT