ಸಾಂದರ್ಭಿಕ ಚಿತ್ರ 
ರಾಜ್ಯ

ರೆಡ್ಡಿ ಪುತ್ರಿ ವಿವಾಹದಲ್ಲಿ ಬಳ್ಳಾರಿಯ ಗುಲ್ಜಾರ್ ಪಾನ್ ಹವಾ

ಪಾನ್ ತಿಂದರೇ ಮನಸ್ಸು ನಿರಾಳವಾಗುತ್ತದೆ ಎಂದು ಬನ್ಸಾರಿ ಪಾನ್ ಬೀಡಾ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ...

ಬಳ್ಳಾರಿ: ಪಾನ್ ತಿಂದರೇ ಮನಸ್ಸು ನಿರಾಳವಾಗುತ್ತದೆ ಎಂದು ಬನ್ಸಾರಿ ಪಾನ್ ಬೀಡಾ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡಿ ಹೊಗಳಿದ್ದರು.

ಆದರೆ ಬಳ್ಳಾರಿಯ ಗುಲ್ಜಾರ್ ಪಾನ್ ತಿಂದರೇ ಕೇವಲ ಮನಸ್ಸು ಮಾತ್ರವಲ್ಲ ದೇಹ ಹಾಗೂ ಮನಸ್ಸು ಎರಡು ರಿಲಾಕ್ಸ್ ಆಗಿ ಆರೋಗ್ಯ ಉತ್ತಮವಾಗುತ್ತದೆ.

ಬಳ್ಳಾರಿಯ ಎಸ್ ಎನ್ ಪೇಟ್ ನಲ್ಲಿರುವ ಗುಲ್ಜಾರ್ ಪಾನ್ ಬೀಡಾ ಪ್ರಿಯರಿಗೆ ಪರಿಚಿತವಾಗಿರುವ ಅಂಗಡಿ. ಗಾಲಿ ಜನಾರ್ದನ ರೆಡ್ಡಿ, ದಿವಾಕರ್ ಬಾಬು, ಅಲ್ಲಮ್ ವೀರಭದ್ರಪ್ಪ ಸೇರಿದಂತೆ ಹಲವು ಗಣ್ಯರ ಮನೆಯಲ್ಲಿ ನಡೆಯುವ ಸಮಾರಂಭಗಳಲ್ಲಿ ಗುಲ್ಜಾರ್ ಪಾನ್ ಇದ್ದೇ ಇರಬೇಕು. ಬಳ್ಳಾರಿಯಲ್ಲಿ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶದಲ್ಲೂ ಗುಲ್ಜಾರ್ ಪಾನ್ ಪ್ರಸಿದ್ಧಿ ಪಡೆದಿದೆ,

ಊಟದ ನಂತರ ಬೀಡಾ ತಿನ್ನುವ ಹವ್ಯಾಸ ಇರುವವರಿಗೆ ಗುಲ್ಜಾರ್ ಪಾನ್ ವಿಶೇಷವಾದ ಪಾನ್ ತಯಾರಿಸಿಕೊಡುತ್ತದೆ, ಸುಮಾರು 26 ಬಗೆಯ ಸಿಹಿ ಪಾನ್ ಗಳು ತಯಾರಾಗುತ್ತವೆ. ರೆಗ್ಯುಲರ್, ಸ್ಪೆಷಲ್ ಸ್ವೀಟ್ ಮತ್ತು ಸ್ಪೆಷಲ್ ಪಾನ್ ಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

2002 ರಲ್ಲಿ ಈ ಪಾನ್ ಶಾಪ್ ಆರಂಭವಾಯಿತು. ಸೈಯ್ಯದ್ ಆಹ್ಮದ್ ಅಬ್ದುಲ್ಲಾ ಸೈಯ್ಯದ್ ಜಾಫರ್ ಸಾದ್ವಿಕ್ ಸಹೋದರರು ಈ ಪಾನ್ ಶಾಪ್ ನಡೆಸುತ್ತಿದ್ದಾರೆ.  1948 ರಲ್ಲಿ ಇವರ ತಾತ ಸೈಯ್ಯದ್ ಉಸ್ಮಾನ್ ಈ ಅಂಗಡಿ ಆರಂಭಿಸಿದರು. ಮೊದಲಿಗೆ ಅಂಗಡಿಯಲ್ಲಿ ಬೀಡಿ ಮಾರಾಟ ಮಾಡಲಾಗುತ್ತಿತ್ತು. ನಂತರ ಪಾನ್ ಮಾರಾಟ ಆರಂಭಿಸಲಾಯಿತು. ನಮ್ಮ ತಂದೆ ಸೈಯ್ಯದ್ ಮೊಹಮದ್ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿದರು ಎಂದು ಅಜ್ಮತ್ ತಿಳಿಸಿದ್ದಾರೆ.

ನಾನು , ನನ್ನ ಸಹೋದರರು ಮುಂಬಯಿಗೆ ತೆರಳಿ ಪಾನ್ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡು ಬಂದೆವು ಎಂದು ಹೇಳುವ ಅಜ್ಮತ್, 2001 ರಲ್ಲಿ ಬಳ್ಳಾರಿಗೆ ಬಂದು 2002 ರಿಂದ ಎಸ್ ಎನ್ ಪೇಟ್ ನಲ್ಲಿ 5.ಸಾವಿರ ರೂ ಬಂಡವಾಳ ಹೂಡುವ ಮೂಲಕ ಪಾನ್ ಮಾರಾಟ ಆರಂಭಿಸಿದೆವು ಎಂದು ತಿಳಿಸಿದ್ದಾರೆ.

ಪಾನ್ ಗೆ ಹಾಕುವ ಎಲ್ಲಾ ಸಾಮಾಗ್ರಿಗಳನ್ನು ಮನೆಯಲ್ಲೇ ತಯಾರು ಮಾಡುವುದು ಗುಲ್ಜಾರ್ ಪಾನ್ ನ ರುಚಿ ಹೆಚ್ಚಲು ಕಾರಣವಾಗಿದೆ. ಗುಲ್ಕನ್, ಕಾಜುರಿ ಸುಪಾರಿ, ಪಾನ್ ಕಾಂತ ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಕುಟುಂಬಸ್ಥರೇ ಸೇರಿ ಮನೆಯಲ್ಲಿ ತಯಾರಿಸುತ್ತಾರೆ ಎಂದು ಅಜ್ಮತ್ ಹೇಳಿದ್ದಾರೆ.

ಜನಾರ್ದನ ರೆಡ್ಡಿ ತಮ್ಮ ಪುತ್ರಿ ವಿವಾಹಕ್ಕೆ 50 ಸಾವಿರ ಪಾನ್ ಗೆ ಆರ್ಡರ್ ನೀಡಿದ್ದರು. ಕಳೆದ 8 ವರ್ಷಗಳಿಂದ ನಮ್ಮ ಪಾನ್ ಅಂಗಡಿಗೆ ಸತತವಾಗಿ ಭೇಟಿ ನೀಡುತ್ತಾ ಬಂದಿರುವ ರೆಡ್ಡಿ ಮಗಳ ಮದುವೆಯಲ್ಲಿ ಡ್ರೈಫ್ರೂಟ್ ಪಾನ್ ತಯಾರಿಸಿಕೊಡಲಾಗಿದೆ.

ಸ್ವೀಟ್ ಪಾನ್ ಬೆಲೆ 20 ರು. ಅದಕ್ಕೆ ತಂಬಾಕು ಸೇರಿಸುವುದಾದರೇ  ಒಂದು ಪಾನ್ ಬೀಡಾ ಗೆ 45 ರು. ತೆಗೆದು ಕೊಳ್ಳುತ್ತೇವೆ. ಚಳಿಗಾಲ ಆರಂಭವಾಗಿರುವುದರಿಂದ ಆಯುರ್ವೇದಿಕ್ ಸಾಮಾಗ್ರಿಗಳನ್ನು ಬಳಸಿ ಪಾನ್ ತಯಾರಿಸಿಕೊಡುತ್ತೇವೆ. ಇದು ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಅಜ್ಮತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!