ತುಮಕೂರು: ತುಮಕೂರಿನಲ್ಲಿ ಮೈಸೂರು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ನಿಂತ 70 ವರ್ಷದ ಹಿರಿಯ ನಾಗರಿಕರೊಬ್ಬರು ಕ್ಯೂನಲ್ಲಿಯೇ ಜೀವಕಳೆದುಕೊಂಡಿದ್ದಾರೆ.
ತುಮಕೂರು ತಾಲ್ಲೂಕು ಚೇಳೂರಿನ ಎಸ್ ಬಿಎಂ ಬ್ಯಾಂಕಿನ ಮುಂದೆ ಇಂದು ಮಧ್ಯಾಹ್ನ 12.30 ಕ್ಕೆ ಸಿದ್ದಪ್ಪ(70) ಎಂಬುವವರು ನೋಟನ್ನು ಬದಲಾಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದಿದ್ದಾರೆ. ಸರತಿ ಸಾಲಿನಲ್ಲಿ ನಿಂತಿದ್ದ ಜನರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ಬ್ಯಾಂಕ್ ಗಳು ಇಂದು ದೇಶಾದ್ಯಂತ ಹಳೆ ನೋಟ್ ಗಳ ಬದಲಾವಣೆ ಸೇವೆಯನ್ನು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಮೀಸಲಿಟ್ಟದ್ದವು. ಹೀಗಾಗಿ ಬ್ಯಾಂಕಿನ ಮುಂದೇ ಹಿರಿಯ ನಾಗರಿಕರೇ ತುಂಬಿದ್ದರು.
ಐವತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ನೋಟು ಬದಲಾವಣೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಪ್ರತಿಪಕ್ಷಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಹಾಗಯೇ ನೋಟಿನ ಕಾರಣದಿಂದಾಗಿ ಆದ ಅನೇಕ ಸಾವು ನೋವುಗಳಿಗೆ ಸರ್ಕಾರದ ದಿಢೀರ್ ನಿರ್ಧಾರವೇ ಕಾರಣ ಎಂದು ಆರೋಪಿಸಿವೆ.