ರಾಜ್ಯ

ರೋಗಿಗಳಿಗೆ ಚಿಲ್ಲರೆ ಹಣ ನೀಡಿ ಸಹಾಯ ಮಾಡಿದ ಗಾಳಿಪಟ ಹಾರಾಟಗಾರರು

Shilpa D

ಬೆಂಗಳೂರು:  ಅಗತ್ಯ ವಸ್ತುಗಳ ಖರೀದಿಗೆ ತೊಂದರೆ ಆಗಬಾರದೆಂದು ಗಾಳಿಪಟ ಹಾರಾಟಗಾರರ ತಂಡವೊಂದು ರೋಗಿಗಳಿಗೆ  ಚಿಲ್ಲರೆ ಹಣ ವಿತರಿಸಿ ನೆರವು ನೀಡಿದ್ದಾರೆ. ಹಿರಿಯ ಗಾಳಿಪಟ ಹಾರಾಟಗಾರ ವಿ. ಕೃಷ್ಣೋಜಿರಾವ್‌ ಮತ್ತು ಸ್ನೇಹಿತರು ನಗರದ ಬೌರಿಂಗ್‌ ಆಸ್ಪತ್ರೆ 500 ಮತ್ತು 1000 ರು.ಗೆ ಚಿಲ್ಲರೆ ವಿತರಿಸಿದ್ದಾರೆ.

ಭಾನುವಾರ ಬ್ಯಾಂಕ್ ಗಳಿಗೆ ರಜೆ ಇತ್ತು, ಜೊತೆಗೆ ಎಟಿಎಂ ಗಳ ಮುಂದೆ ಕ್ಯೂ ನಿಂತು ಅಗತ್ಯ ಸಾಮಾನು ಖರೀದಸಲಾಗದ ಜನಗಳಿಗೆ ರೋಗಿಗಳಿಗೆ ಚಿಲ್ಲರೆ ಸಿಗದೆ ಬಹಳಷ್ಟು ತೊಂದರೆ ಆಗುತ್ತಿರುವುದನ್ನು ಗಮನಿಸಿ ನಾನು ಮತ್ತು ನನ್ನ ಸ್ನೇಹಿತರಾದ ನಿರಂಜನ್‌ರಾವ್‌ ಕದಂ,  ಚಂದ್ರಶೇಖರ್‌ ಹಾಗೂ ಬಿ.ಡಿ.ಶೆಣೈ ನಮ್ಮ ಬಳಿ ಇದ್ದ 100ರ ನೋಟುಗಳನ್ನು ಒಟ್ಟುಗೂಡಿಸಿ ಹಂಚಲು ನಿರ್ಧರಿಸಿದೆವು’ ಎಂದು ಕೃಷ್ಣೋಜಿರಾವ್‌ ಹೇಳಿದ್ದಾರೆ.

ಹೊಸದಾದ 2000 ನೋಟನ್ನು ಚಿಲ್ಲರೆ ಮಾಡಿಸಿಕೊಳ್ಳಲು ಸಹ ಅನೇಕರು ಬಂದಿದ್ದರು. ಆದರೆ ಅವರಿಗೆ ಹೊರಗಡೆ ಚಿಲ್ಲರೆ ಸಿಗುವ ಅವಕಾಶ ಹೆಚ್ಚಿರುವುದರಿಂದ, ರದ್ದಾದ ನೋಟುಗಳಿಗೆ ಮಾತ್ರ ಚಿಲ್ಲರೆ ವಿತರಿಸಲಾಯಿತು’ ಎಂದು ಮಾಹಿತಿ ನೀಡಿದರು. ನಮ್ಮ ಬಳಿಯಿದ್ದ ಎಲ್ಲ ನೂರರ ನೋಟುಗಳನ್ನು ತಂದಿದ್ದೇವೆ. ಇತರರು ನಮ್ಮೊಂದಿಗೆ ಕೈಜೋಡಿಸಿದರೆ ಡಿಸೆಂಬರ್‌ 30ರವರೆಗೂ ರೋಗಿಗಳಿಗೆ ಅನುಕೂಲ ಕಲ್ಪಿಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ. ಆರ್ ಟಿ ನಗರ ನಿವಾಸಿಯಾದ ಕೃಷ್ಣೋಜಿರಾವ್ ನಿನ್ನೆ ಸುಮಾರು 150 ಮಂದಿಗೆ ಚಿಲ್ಲರೆ ನೀಡಿ ಸಹಾಯ ಮಾಡಿದ್ದಾರೆ. ಹಲವು ಅಂತಾರಾಷ್ಟ್ರೀಯ ಗಾಳಿಪಟ ಹಾರಾಟ ಸ್ಪರ್ಧೆಯಲ್ಲಿ ಕೃಷ್ಣೋಜಿ ರಾವ್ ಭಾಗವಹಿಸಿದ್ದಾರೆ.
 

SCROLL FOR NEXT