ಮೈಸೂರು: ಪಾನಿಪುರಿ 1 ರು, ಮಸಾಲ ಪುರಿ 2ರು, ಸಮೋಸ 3 ರು, ಜಿಲೇಬಿ 4 ರು, ಇದು ಮೈಸೂರಿನ ಸ್ವೀಟ್ ಅಂಗಡಿ ಯೊಂದು ನೀಡಿರುವ ಆಫರ್.
ನೋಟು ನಿಷೇಧದಿಂದಾಗಿ ಜನರ ಬಳಿ ಚಿಲ್ಲರೆ ಇಲ್ಲದೇ ತಿನ್ನಲು ಬರುವ ಗ್ರಾಹಕರ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ಮೈಸೂರಿನ ಕುವೆಂಪು ನಗರದ ವೈಷ್ಣವಿ ಚಾಟ್ಸ್ ತನ್ನ ಗ್ರಾಹಕರಿಗೆ ಮೂರು ದಿನಗಳ ಕಾಲ ಭರಪೂರ ಕೊಡುಗೆ ನೀಡಿತ್ತು.
ದಿನಾಂಕ 23 ರಿಂದ 25 ರ ರವರೆಗೆ ಸಂಜೆ 6.30ರಿಂದ 9 ಗಂಟೆಯವರೆಗೆ ಕೇವಲ 1 ರೂಪಾಯಿಗೆ ಪಾನಿಪುರಿ, 2 ರೂ.ಗೆ ಮಸಾಲೆ ಪುರಿ, 3 ರೂ.ಗೆ ಸಮೋಸ, 4 ರೂಪಾಯಿಗೆ ಜಿಲೇಬಿ, ಹಾಗೂ ಐದು ರೂಪಾಯಿಗೆ ಪಾವ್ ಬಜ್ಜಿ ನೀಡುವುದಾಗಿ ಅಂಗಡಿ ಮಾಲೀಕ ನವೀನ್ ಹೇಳಿದ್ದಾರೆ.
ಒಂದು ರೂಪಾಯಿ ಪಾನಿಪುರಿ ಸೇರಿದಂತೆ ಇತರ ಚಾಟ್ಸ್‌ಗಳನ್ನ ತಿನ್ನಲು ನಿನ್ನೆ ಸಂಜೆ ಅಂಗಡಿಯ ಮುಂದೆ ಜನಸಾಗರವೇ ಸೇರಿತ್ತು. ಒಂದು ಕಿ.ಮಿ ವರೆಗೆ ಸರತಿ ಸಾಲಿನಲ್ಲಿ ನಿಂತು ಜನರು ಚಾಟ್ಸ್ ಸವಿದಿದ್ದು ವಿಶೇಷ. ಸುಮಾರು 1 ಸಾವಿರ ಜನ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಎರಡು ದಿನಗಳಲ್ಲಿ 7 ಸಾವಿರ ಗ್ರಾಹಕರು ಬಂದು ಚಾಟ್ಸ್ ಸವಿದಿದ್ದಾರೆ. ಚಾಟ್ಸ್ ವಿತರಿಸಲು ವಿಳಂಬವಾಗಿ ಕೆಲಕಾಲ ಗೊಂದಲ ಉಂಟಾಗಿತ್ತು.