ಯದುವೀರ್ ಗೆ ಪಾದ ಪೂಜೆ ಮಾಡುತ್ತಿರುವ ರಾಣಿ ತ್ರಿಶಿಕಾ ಕುಮಾರಿ 
ರಾಜ್ಯ

400 ವರ್ಷದ ಹಳೇಯ ಸಂಪ್ರದಾಯವನ್ನು ಮುಂದುವರಿಸಿದ ಯದುವೀರ್ ಒಡೆಯರ್

: 400 ವರ್ಷಗಳಿಂದ ನಡೆದು ಕೊಂಡು ಬಂದಿರುವ ಮೈಸೂರು ಮನೆತನದ ಖಾಸಗಿ ದರ್ಬಾರ್ ಅನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ...

ಮೈಸೂರು: 400 ವರ್ಷಗಳಿಂದ ನಡೆದು ಕೊಂಡು ಬಂದಿರುವ ಮೈಸೂರು ಮನೆತನದ ಖಾಸಗಿ ದರ್ಬಾರ್ ಅನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದುವರಿಸಿದ್ದಾರೆ.  ಅದರಂತೆ ದಸರಾ ಅಂಗವಾಗಿ ಶನಿವಾರ ಮೈಸೂರಿನ ಅಂಬ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭಿಸಿದ್ದಾರೆ.

ರಾಜಮನೆತನದ ಸಂಬಂಧಿಕರೊಡನೆ ಅರಸರ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಯುತ್ತದೆ. ಯದುವೀರ್ ತಮ್ಮ ಪತ್ನಿ ತ್ರಿಶಿಕಾ ಕುಮಾರಿ ಜೊತೆ ನಡೆಸುತ್ತಿರುವ ಮೊದಲ ಖಾಸಗಿ ದರ್ಬಾರ್ ಇದಾಗಿದೆ. ಮುಂದಿನ 10 ದಿನಗಳ ಕಾಲ ಈ ಖಾಸಗಿ ದರ್ಬಾರ್ ನಡೆಯುತ್ತದೆ. ದಿನಕ್ಕೆ ಎರಡು ಬಾರಿ ಎರಡು ಬಾರಿ ಯಧುವೀರ್ ರಾಜ ಪೋಷಾಕು ಧರಿಸಿ ಅರಮನೆಯಲ್ಲಿ ರಾಜರ ಕತ್ತಿಯೊಂದಿಗೆ ಸಿಂಹಾಸನದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

ಚಾಮುಂಡಿ ತೊಟ್ಟಿಯಲ್ಲಿ ಸಾಂಪ್ರದಾಯಿಕ ಸ್ನಾನದ ನಂತರ ಬೆಳಗ್ಗೆ 5.50 ರಿಂದ 6.10 ಒಳಗೆ ಕನಕ ಧಾರಣೆ ನಡೆಯುತ್ತದೆ. ಅಂದರೆ ಸಿಂಹಾಸನಕ್ಕೆ ಚಿನ್ನದ ಜೋಡಿ ಸಿಂಹ ಮತ್ತು ಮೆಟ್ಟಿಲು ಹಾಗೂ ಗಂಡಬೇರುಂಢ ಜೋಡಿಸಿ ಪೂಜಾ ಕಾರ್ಯ ನಡೆಸಲಾಗುತ್ತದೆ. ಇದನ್ನು ಕನಕಧಾರಣೆ ಎನ್ನಲಾಗುತ್ತದೆ.

ಆನೆಗಳು, ಹಸು, ಕುದುರೆಗಳಿಗೆ ಅಲಂಕರಿಸಿ ಮೆರವಣಿಗೆ ಕರೆತರಲಾಗುತ್ತದೆ. ಪುರೋಹಿತರು, ವೇದ ಮಂತ್ರ ಹೇಳುತ್ತಿರುತ್ತಾರೆ, ಹೊಗಳು ಭಟರು ಬಹುಪರಾಕ್ ಹಾಕುತ್ತಿರುತ್ತಾರೆ. ಸಿಂಹಾಸನವೇರುವ ಸಂಪ್ರದಾಯದಂತೆ ನವಗ್ರಹ ಮತ್ತು ಕಳಸಾ ಪೂಜೆ ನಡೆಯುತ್ತದೆ. ಇದಾದ ನಂತರ ಯಧುವೀರ್ ಸಿಂಹಾಸನಕ್ಕೆ ನಮಸ್ಕರಿಸಿ ಆಸೀನರಾಗುತ್ತಾರೆ.

ಯದುವೀರ್ ಸಿಂಹಾಸನದ ಮೇಲೆ ಸುಮಾರು 20 ನಿಮಿಷಗಳ ಕಾಲ ಕುಳಿತು, ಸಾರ್ವಜನಿಕರಿಂದ ಹಾಗೂ ರಾಜ ಮನೆತನದವರಿಂದ ನಮಸ್ಕಾರ ಪಡೆಯುತ್ತಾರೆ. ಅನಂತರ ಸುಮಾರು 20 ದೇವಾಲಯಗಳಿಂದ ಬಂದ ಪ್ರಸಾದವನ್ನು ಯಧುವೀರ್ ಗೆ ನೀಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT