ಸಾಂದರ್ಭಿಕ ಚಿತ್ರ 
ರಾಜ್ಯ

ಪಾರ್ಕಿಂಗ್ ವಿಚಾರಕ್ಕೆ ಜಗಳ: ಹೊಟೇಲ್ ಮ್ಯಾನೇಜರ್ ಮೇಲೆ ಆಟೋ ಚಾಲಕರಿಂದ ಹಲ್ಲೆ

: ಬೈಕ್ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಆಟೋ ಡ್ರೈವರ್ ಗಳು ಹೊಟೇಲ್ ನ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಯಲಹಂಕ ನ್ಯೂ ...

ಬೆಂಗಳೂರು: ಬೈಕ್ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಆಟೋ ಡ್ರೈವರ್ ಗಳು ಹೊಟೇಲ್ ನ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಯಲಹಂಕ ನ್ಯೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಂದನಾ ರೆಸ್ಟೋರೆಂಟ್ ಮ್ಯಾನೇಜರ್ ವಿ. ಪುರಂದರ್ ನಾಯ್ಡು ಎಂಬುವರು ತಾವು ಕೆಲಸ ಮಾಡುವ ರೆಸ್ಟೋರೆಂಟ್ ಮುಂದೆ ರಾತ್ರಿ 8 ಗಂಟೆ ಸುಮಾರಿಗೆ ಬೈಕ್ ಪಾರ್ಕಿಂಗ್ ಮಾಡಿದ್ದಾರೆ. ಇದಾದ ನಂತರ ರೆಸ್ಟೋರೆಂಟ್ ಗೆ ಬಂದ ನಾಲ್ವರು ಆಟೋ ಚಾಲಕರು ನಾಯ್ಡು ಅವರನ್ನು ನಿಂದಿಸಿದ್ದಾರೆ. ಬೈಕ್ ಅಲ್ಲಿ ನಿಲ್ಲಿಸಿರುವುದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಬೈಯ್ದಿದ್ದಾರೆ.

ಈ ವೇಳೆ ನಾಯ್ಡು ತಮ್ಮ ರೆಸ್ಟೊರೆಂಟ್ ಸಿಬ್ಬಂದಿಯನ್ನು ಅಲ್ಲಿಗೆ ಕರೆದಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕರು ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಪುರಂದರ್ ನಾಯ್ದು ದೂರು ದಾಖಲಿಸಿದ್ದಾರೆ.

ಈ ಎಲ್ಲಾ ಘಟನೆಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ನಾಯ್ಡು ಅವರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ಸಾರಿ ಅಮ್ಮ-ಅಪ್ಪಾ': ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದಿಟ್ಟು ಮೂವರು ಅಪ್ರಾಪ್ತ ಸೋದರಿಯರು ಆತ್ಮಹತ್ಯೆ-Video

ಹೊಸ ವ್ಯಾಪಾರ ಒಪ್ಪಂದ: US ಸರಕುಗಳು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ, ನಮ್ಮ ರೈತರು ಏನು ಮಾಡ್ಬೇಕು? ಸಂಜಯ್ ರಾವತ್ Video

ಎನ್ ಸಿಪಿ ಬಣಗಳ ವಿಲೀನ? ಶರದ್ ಪವಾರ್, ಅಜಿತ್ ಪವಾರ್ ಪುತ್ರರ ನಡುವೆ ಮಹತ್ವದ ಮಾತುಕತೆ!

ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ವ್ಯಕ್ತಿಯ ಹತ್ಯೆ: MLA ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು; ಇದೇನಿದು ಹರಿಪ್ರಸಾದ್ ಆರೋಪ?

ದೇಶದ್ರೋಹಿ ಟೀಕೆ: ಸಂಸತ್ ಆವರಣದಲ್ಲಿ ರಾಹುಲ್ ಗಾಂಧಿ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ!

SCROLL FOR NEXT