ಬೆಂಗಳೂರು: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಿವಾಜಿನಗರದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಎಂಬುವವರನ್ನು ಮಾರಕಾಸ್ತ್ರದಿಂದ ಇರಿದು ಕೊಂದಿದ್ದಾರೆ.
ಬೈಕ್ ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ರುದ್ರೇಶ್ ಕತ್ತಿಗೆ ತಲ್ವಾರ್ ನಿಂದ ಚುಚ್ಚಿದ. ಈ ವೇಳೆ ನಾನು ಅವರಿಗೆ ಕಲ್ಲು ಎಸೆದೆ. ಅದರಲ್ಲಿ ಒಬ್ಬನಿಗೆ ಕಲ್ಲು ತಾಗಿತು, ಆದರೆ ಆತ ಪರಾರಿಯಾಗಿಬಿಟ್ಟ. ಈ ವೇಳೆ ಅವನು ಒಮ್ಮೆ ಕೆಳಗೆ ಬಿದ್ದ, ಆತನನ್ನು ನಾನು ಗುರುತು ಹಿಡಿಯಬಲ್ಲೆ ಎಂದು ಘಟನೆ ನಡೆದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಅವರು ಬಂದ ಬೈಕ್ ಗೆ ನಂಬರ್ ಪ್ಲೇಟ್ ಇರಲಿಲ್ಲ ಎಂದು ಹೇಳಿದ್ದಾರೆ.
15 ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯ ಕರ್ತರಾಗಿದ್ದರು. ಭಾನುವಾರ ಹಮ್ಮಿಕೊಂಡಿದ್ದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ತಮ್ಮ ಇಬ್ಬರು ಚಿಕ್ಕಮಕ್ಕಳೊಂದಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ಕಾಮರಾಜ ರಸ್ತೆಯಲ್ಲಿ ಟೀ ಕುಡಿಯಲೆಂದು ಸ್ನೇಹಿತರ ಜೊತೆ ತೆರಳಿದ್ದರು.
ರಾಧಾಕೃಷ್ಣ ದೇವಾಲಯದ ಬಳಿ ಬೈಕ್ ನಿಲ್ಲಿಸಿ ತಮ್ಮ ಆರ್ ಎಸ್ ಎಸ್ ಸಮವಸ್ತ್ರವನ್ನು ಧರಿಸುತ್ತಿದ್ದರು. ರುದ್ರೇಶ್ ಮೇಲೆ ಹಲ್ಲೆ ನಡೆದ ತಕ್ಷಣ ನಾವು ಆಟೋದ್ಲಲಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದವು, ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಕುಮಾರ್ ಹೇಳಿದ್ದಾರೆ. ರುದ್ರೇಶ್ ಗೆ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ರುದ್ರೇಶ್ 8 ಮಂದಿಯ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು.
ರುದ್ರೇಶ್ ಒಬ್ಬ ಸಜ್ಜನ. ಹತ್ಯೆಯ ಹಿಂದೆ ಯಾವುದೋ ಸಂಘ ಟನೆಯ ವ್ಯವಸ್ಥಿತ ಸಂಚು ಇದೆ. ವೃತ್ತಿಪರ ಹಂತಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ ಆರೋಪಿಸಿದ್ದಾರೆ. ರುದ್ರೇಶ್ ಯಾರೊಂದಿಗೆ ದ್ವೇಷ ಕಟ್ಟಿಕೊಂಡವರಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯ ಕರ್ತನೆಂಬ ಒಂದೇ ಉದ್ದೇಶಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ದೂರಿದರು.
ಇಷ್ಟು ವರ್ಷ ದಿಂದ ಶಿವಾಜಿ ವೃತ್ತದಲ್ಲಿ ಯಾರೂ ಗಣೇಶನ ಮೂರ್ತಿಯನ್ನು ಕೂರಿಸಿ ರಲಿಲ್ಲ. ಆದರೆ ಈ ವರ್ಷ ರುದ್ರೇಶ್ ಅವರು ಗಣೇಶ ಮೂರ್ತಿ ಕೂರಿಸಿ, ಅದ್ದೂರಿ ಕಾರ್ಯಕ್ರಮ ಮಾಡಿದ್ದರು.ಇದು ಹಲವರ ಸಿಟ್ಟಿಗೆ ಕಾರಣವಾಗಿತ್ತು. ಶಿವಾಜಿ ವೃತ್ತಕ್ಕೆ ಬಂದಿದ್ದ ಯಾರೋ ಅಪರಿಚಿತರು, ಗಣೇಶ ಹಬ್ಬದ ದಿನ ಪ್ರಸಾದ ಹಂಚುತ್ತಿದ್ದ ವ್ಯಕ್ತಿ ಎಲ್ಲಿದ್ದಾನೆ ಎಂದು ಸ್ಥಳೀಯರನ್ನು ವಿಚಾರಿಸಿ ಹೋಗಿದ್ದರು. ಈ ರೀತಿ ಎಲ್ಲ ಕಡೆಗಳಿಂದ ರುದ್ರೇಶ್ ಅವರ ವಿವರ ಸಂಗ್ರಹಿಸಿರುವ ಹಂತಕರು, ವ್ಯವಸ್ಥಿತ ವಾಗಿ ಸಂಚು ರೂಪಿಸಿ ಹತ್ಯೆಗೈದಿದ್ದಾರೆ’ ಎಂದು ದೂರಿದರು.