ಯುವತಿ ಕಡೆಯವರಿಂದ ಹಲ್ಲೆಗೊಳಗಾದ ತಂದೆ-ಮಗ 
ರಾಜ್ಯ

ಯುವತಿಗೆ ಪ್ರೀತಿಸಬೇಡ ಎಂದಿದ್ದೇ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆಗೆ ಕಾರಣವಾಯ್ತೆ?

ಯುವತಿಯೊರ್ವಳಿಗೆ ಪ್ರೀತಿಸಬೇಡ ಎಂದು ಹೇಳಿದ್ದೆ ತಂದೆ-ಮಗನ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ...

ಮೈಸೂರು: ಯುವತಿಯೊರ್ವಳಿಗೆ ಪ್ರೀತಿಸಬೇಡ ಎಂದು ಹೇಳಿದ್ದೆ ತಂದೆ-ಮಗನ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 
ಮೈಸೂರಿನ ಎನ್ ಆರ್ ಮೊಹಲ್ಲಾದ ಮುಕ್ತಾರ್ ಹಾಗೂ ಅವರ ಮಗ ಮೊಹಿನ್ ಅಹಮದ್ ಮೇಲೆ ಭಾನುವಾರ ರಾತ್ರಿ ನಾಲ್ವರು ಅಪರಿಚಿತರು ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. 
ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೋಹಿನ್ ಪತ್ನಿ ತಮ್ಮ ಸಿರಾಜ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಇದು ಮನೆಯಲ್ಲಿ ಸದಾ ಜಗಳಕ್ಕೆ ಕಾರಣವಾಗಿತ್ತು. ಈಗಾಗಿ ಮೋಹಿನ್ ಆ ಯುವತಿಗೆ ಫೋನ್ ಮಾಡಿ ತನ್ನ ಭಾವಮೈದನನ್ನು ಪ್ರೀತಿಸದಂತೆ ಹೇಳಿದ್ದಾನೆ. 
ಮೋಹಿನ್ ಮಾತಿನಿಂದ ಕೋಪಗೊಂಡ ಯುವತಿ ತನ್ನ ಕಡೆಯವರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ ಎಂದು ಮೋಹಿ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯುವತಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 
ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮೋಹಿನ್ ಪರಿಸ್ಥಿತಿ ಗಂಭೀರವಾಗಿದ್ದು, ತಂದೆ ಮುಕ್ತಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!