ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿರುವ ಕೈದಿಗಳಲ್ಲಿ ಅರ್ಧದಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರು

ಕರ್ನಾಟಕದ ಜೈಲಿನಲ್ಲಿರುವ ಅರ್ಧದಷ್ಟು ಅಪರಾಧಿಗಳು ಯುವಕರಾಗಿದ್ದಾರೆ. ರಾಷ್ಟ್ರೀಯ ಅಪರಾಧ...

ಬೆಂಗಳೂರು: ಕರ್ನಾಟಕದ ಜೈಲಿನಲ್ಲಿರುವ ಅರ್ಧದಷ್ಟು ಅಪರಾಧಿಗಳು ಯುವಕರಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಳದ ವರದಿ ಪ್ರಕಾರ, ರಾಜ್ಯದಲ್ಲಿ 18ರಿಂದ 30 ವರ್ಷದೊಳಗಿನ ಶೇಕಡಾ 53.6 ರಷ್ಟು ಅಪರಾಧಿಗಳಿದ್ದು, ದೇಶದ ಸರಾಸರಿ ಶೇಕಡಾ 31.2ಕ್ಕಿಂತ ಜಾಸ್ತಿಯಾಗಿದೆ. ಮತ್ತು ನಮ್ಮ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ ಮಿಜೋರಾಂ(ಶೇಕಡಾ 65.7) ಇದೆ.
ವಿಚಾರಣಾಧೀನ ಕೈದಿಗಳಲ್ಲಿ ಕೂಡ ಅರ್ಧದಷ್ಟು ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.2015ರ ದಾಖಲೆ ಪ್ರಕಾರ, ನಮ್ಮ ರಾಜ್ಯದ ವಿವಿಧ ಜೈಲುಗಳಲ್ಲಿ ಒಟ್ಟು 3 ಸಾವಿರದ 904 ಅಪರಾಧಿಗಳಿದ್ದು ಅವರಲ್ಲಿ 3 ಸಾವಿರದ 702 ಪುರುಷರು ಮತ್ತು 202 ಮಹಿಳೆಯರಿದ್ದಾರೆ. ಇವರಲ್ಲಿ 2 ಸಾವಿರ ಮಂದಿ ಪುರುಷರು ಮತ್ತು 94 ಮಹಿಳೆಯರು 18ರಿಂದ 30 ವರ್ಷದೊಳಗಿನವರಾಗಿದ್ದಾರೆ. ಅದು ಒಟ್ಟು ಅಪರಾಧಿಗಳಲ್ಲಿ ಶೇಕಡಾ 53.6ರಷ್ಟಿದ್ದಾರೆ. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಂಖ್ಯೆ ಹೆಚ್ಚಾಗಿದೆ. ತಮಿಳು ನಾಡಿನಲ್ಲಿ ಶೇಕಡಾ 21.4, ಕೇರಳದಲ್ಲಿ ಶೇಕಡಾ 34.9, ಆಂಧ್ರ ಪ್ರದೇಶದಲ್ಲಿ ಶೇಕಡಾ 25.4 ಮತ್ತು ತೆಲಂಗಾಣದಲ್ಲಿ ಶೇಕಡಾ 37.7ರಷ್ಟಿದೆ.30ರಿಂದ 50 ವರ್ಷದೊಳಗಿನ ಸಾವಿರದ 599 ಪುರುಷರು ಮತ್ತು 100 ಮಹಿಳೆಯರು ಸೇರಿ ಒಟ್ಟು ಸಾವಿರದ 699 ಅಪರಾಧಿಗಳಿದ್ದಾರೆ.
ದಕ್ಷಿಣ ಭಾರತದಲ್ಲಿ 18ರಿಂದ 30 ವರ್ಷದೊಳಗಿನ ವಿಚಾರಣಾಧೀನ ಕೈದಿಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚಿದ್ದು ಅದು ದೇಶದ ಸರಾಸರಿ ಸಂಖ್ಯೆ ಶೇಕಡಾ 47.5ಕ್ಕಿಂತ ಜಾಸ್ತಿಯಾಗಿದೆ. ಕರ್ನಾಟಕದಲ್ಲಿ ಶೇಕಡಾ 52.7ರಷ್ಟು ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ.9 ಸಾವಿರದ 314 ಮಂದಿ ವಿಚಾರಣಾಧೀನ ಕೈದಿಗಳ ಪೈಕಿ 4 ಸಾವಿರದ 909 ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದು 4 ಸಾವಿರದ 30 ಕೈದಿಗಳು 30ರಿಂದ 50 ವರ್ಷದೊಳಗಿನವರಾಗಿದ್ದಾರೆ.
ಸಮೀಕ್ಷೆಯಲ್ಲಿ ತಿಳಿದುಬಂದ ಇನ್ನೊಂದು ಅಂಶವೆಂದರೆ ಕೈದಿಗಳ ಶಿಕ್ಷಣ ಗುಣಮಟ್ಟ ಮತ್ತು ಶಿಕ್ಷೆಯ ಪ್ರಮಾಣದ ಮಧ್ಯೆ ಇರುವ ಸಂಬಂಧ. ಅಪರಾಧಿಗಳ ಪೈಕಿ, ಶೇಕಡಾ 32.5ರಷ್ಟು ಮಂದಿ ಅವಿದ್ಯಾವಂತರು ಮತ್ತು ಶೇಕಡಾ 41.2ರಷ್ಟು ಮಂದಿ ಹತ್ತನೇ ತರಗತಿಯವರೆಗೆ ಅಥವಾ ಅದಕ್ಕಿಂತ ಕಡಿಮೆ ಓದಿದವರು. ಪದವಿಯವರೆಗೆ ಓದಿದ ಅಪರಾಧಿಗಳ ಸಂಖ್ಯೆ ಶೇಕಡಾ 1ಕ್ಕಿಂತ ಕಡಿಮೆ. ಅದೇ ರೀತಿ ವಿಚಾರಣಾಧೀನ ಕೈದಿಗಳ ಪೈಕಿ ಶೇಕಡಾ 32.6ರಷ್ಟು ಮಂದಿ ಅಶಿಕ್ಷಿತರಾಗಿದ್ದು ಶೇಕಡಾ 49.6ರಷ್ಟು ಮಂದಿ 10ನೇ ತರಗತಿ ಅಥವಾ ಅದಕ್ಕಿಂತ ಕಡಿಮೆ ಓದಿರುವವರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಿವೃತ್ತ ಡಿಜಿ ಮತ್ತು ಐಜಿಪಿ ಎಸ್ ಟಿ ರಮೇಶ್, 18ರಿಂದ 30 ವರ್ಷದೊಳಗಿನ ಅಪರಾಧಿಗಳ ಸಂಖ್ಯೆ ಹೆಚ್ಚಾಗಿದೆ ಏಕೆ ಎಂದು ವಿಸ್ತೃತ ಅಧ್ಯಯನ ಮಾಡಬೇಕು. ಕರ್ನಾಟಕ ಬೆಳವಣಿಗೆ ಹೊಂದುತ್ತಿರುವ ರಾಜ್ಯವಾಗಿದ್ದು ಇಲ್ಲಿನ ಉದ್ಯೋಗದ ಅವಕಾಶದಿಂದಾಗಿ ಅನೇಕ ಜನರನ್ನು ಸೆಳೆಯುತ್ತಿದೆ. ಅಲ್ಲದೆ ಅಪರಾಧ ಮಾಡುವವರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ ಎನ್ನುತ್ತಾರೆ.
ವಲಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಕರ್ನಾಟಕದಲ್ಲಿ ಅಪರಾಧ ನಡೆಯುವ ಸಂಖ್ಯೆ ಹೆಚ್ಚು ಎನ್ನುತ್ತಾರೆ ಮತ್ತೊಬ್ಬ ತಜ್ಞ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ