ಚಿಕ್ಕಮಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಅಸಲಿಗೆ ಉದ್ಯಮಿ ಎಚ್.ಎಮ್. ತೇಜಸ್ ಅವರ ಅಪಹರಣವೇ ಆಗಿರಲಿಲ್ಲ ಎಂದು ಗುರುವಾರ ಪ್ರಕರಣದ ಆರೋಪಿ ಹೇಳಿಕೆ ನೀಡಿದ್ದಾರೆ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನಟರಾಜ್ ಅವರು ಈ ಬಗ್ಗೆ ಇಂದು ಹೇಳಿಕೆ ನೀಡಿರುವ ನಟರಾಜ್, ಹಂಡಿಭಾಗ್ ಅವರ ಆತ್ಮಹತ್ಯೆಗೆ ಉದ್ಯಮಿ ಎಚ್.ಎಮ್.ತೇಜಸ್ ಗೌಡ ಮಾಡಿದ್ದ ಸಂಚು ಕಾರಣ ಎಂದಿದ್ದಾರೆ.
ಜೂಜು, ಬೆಟ್ಟಿಂಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ತೇಜಸ್‌ಗೆ ಹಂಡಿಭಾಗ್ ಅವರು ಎಚ್ಚರಿಕೆ ನೀಡಿ ಎದುರು ಹಾಕಿಕೊಂಡಿದ್ದರು. ಹೀಗಾಗಿ ತೇಜಸ್ ಹಂಡಿಭಾಗ್ ವಿರುದ್ಧ ಹುನ್ನಾರ ನಡೆಸಿ ಅಪಹರಣ ಪ್ರಕರಣದಲ್ಲಿ ಸಿಲುಕಿಸಿದ. ನಿಜವಾಗಲೂ ಅಪಹರಣವೇ ನಡೆದಿರಲಿಲ್ಲ. ತೇಜಸ್ ಸ್ವತಃ ಅಭಿಷೇಕ್ ಜೊತೆ ಬೆಂಗಳೂರಿಗೆ ತೆರಳಿ ಅಪಹರಣದ ಕತೆ ಕಟ್ಟಿ ಒಂದೇ ಬಾಣದಲ್ಲಿ 2 ಹಕ್ಕಿ ಹೊಡೆದಿದ್ದ'ಎಂದು ಹೇಳಿಕೆ ನೀಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾನೆ.