ದೀಪಾವಳಿ: ಪಟಾಕಿ ಹೊಡೆಯುವವರಿಗೆ ಕೆಲವು ಸಲಹೆಗಳು
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ...
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ಆಚರಿಸುವುದು ಕೂಡ ಮುಖ್ಯ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಭರಾಟೆಯಲ್ಲಿ ಮಕ್ಕಳು ಕಣ್ಣು, ಕೈ, ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಪಟಾಕಿ ಸಿಡಿಸುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಅಮೋದ್ ನಾಯಕ್ ಹೇಳುತ್ತಾರೆ.
- ಪಟಾಕಿ ಸಿಡಿಸುವಾಗ ಮಕ್ಕಳು ಪಟಾಕಿಯಿಂದ ಕನಿಷ್ಠ ತೋಳಿನಷ್ಟು ದೂರದಲ್ಲಿರಬೇಕು.
- ಪಟಾಕಿ ಹೊಡೆಯುವಾಗ ಸಡಿಲ ಬಟ್ಟೆಗಳನ್ನು ಧರಿಸಬೇಡಿ.
-ರಕ್ಷಕ ಕವಚಗಳನ್ನು ದೇಹಕ್ಕೆ ಧರಿಸಿಕೊಳ್ಳಿ.
-ಬೇಡದ ವಸ್ತುಗಳು ದೇಹಕ್ಕೆ ಬಿದ್ದರೆ ನೀರಿನಿಂದ ತೊಳೆಯಿರಿ.
-ರಕ್ಷಾ ಫಲಕವಾಗಿ ಕಾಂಟಾಕ್ಸ್ಟ್ ಬದಲು ಗ್ಲಾಸುಗಳನ್ನು ಧರಿಸಿ.
-ತುರ್ತು ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರು ಅಗರ್ ವಾಲ್ ಆಸ್ಪತ್ರೆಯ ದೂರವಾಣಿ ಸಂಖ್ಯೆ 7760968883, 7760969601ನ್ನು ಸಂಪರ್ಕಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.