ರಾಜ್ಯ

ಹೆಚ್ಚಿದ ಜಾಗೃತಿ ಪ್ರಜ್ಞೆ, ತಗ್ಗಿದ ಪಟಾಕಿ ಅವಗಢ!

Srinivas Rao BV

ನವದೆಹಲಿ: ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಎಂದಿಗಿಂತ ಈ ವರ್ಷ ಪಟಾಕಿ ಅವಗಢಗಳ ಸಂಖ್ಯೆ ಕಡಿಮೆಯಾಗಿದೆ. ದೆಹಲಿಯಲ್ಲಿ 100 ಸಣ್ಣ ಪಟಾಕಿ ಅವಗಢಗಳು ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡವರ, ಹಾನಿಗೊಳಗಾದವರ ಸಂಖ್ಯೆ ಕಡಿಮೆ ಆಗಿದೆ.  

ದೆಹಲಿ ಫೈರ್ ಸರ್ವಿಸ್ ನ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರೆಗೂ 100 ಸಣ್ಣ ಅವಗಢಗಳು ಸಂಭವಿಸಿವೆ. ಆದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ 1,500 ಫೈರ್ ಫೈಟರ್ ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ದೆಹಲಿಯಲ್ಲಿ 290 ಪಟಾಕಿ ಅವಗಢಗಳು ಸಂಭವಿಸಿದ್ದವು. ಗಂಭೀರವಾಗಿ ಗಾಯಗೊಂಡ 500 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಅವಗಢದ ಸಂಖ್ಯೆ 100 ಕ್ಕೆ ಇಳಿದಿದೆ.

ಬೆಂಗಳೂರಿನಲ್ಲೂ ಪಟಾಕಿ ಅವಗಢದ ಸಂಖ್ಯೆ ಇಳಿಕೆ!

ಇನ್ನು ಬೆಂಗಳೂರಿನಲ್ಲೂ ಸಹ ಪಟಾಕಿ ಅವಗಢದ ಸಂಖ್ಯೆ ಇಳಿಕೆಯಾಗಿದ್ದು, ಈ ವರೆಗೂ ಕೇವಲ 40 ಪಟಾಕಿ ಅವಗಢಗಳ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನೇತ್ರಾಲಯದಲ್ಲಿ 6 ಜನ, ಮಿಂಟೋ ಆಸ್ಪತ್ರೆಯಲ್ಲಿ 4, ನಾರಾಯಣ ನೇತ್ರಾಲಯದಲ್ಲಿ 9 ಜನರು ಚಿಕಿತ್ಸೆ ಪಡೆಯುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ಅವಗಢಗಳು ಶೇ.70 ರಷ್ಟು ಕಡಿಮೆಯಾಗಿವೆ ಎಂದು ತಿಳಿದುಬಂದಿದೆ. 

SCROLL FOR NEXT