ಕಾವೇರಿ ನಿರ್ಧಾರಕ್ಕೆ ವಿರೋಧ: ನಾಳೆ ಕರ್ನಾಟಕ ಬಂದ್ - ಯಾವ ಸೇವೆ ಉಂಟು, ಯಾವುದು ಇಲ್ಲ?
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಶುಕ್ರವಾರ ಬಂದ್ ಕರೆ ನೀಡಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ...
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಶುಕ್ರವಾರ ಬಂದ್ ಕರೆ ನೀಡಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ.
ಜನಪರ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಬಿಎಂಟಿಸಿ, ಕೆಎಸ್ಆರ್ ಟಿಸಿ, ಲಾರಿಗಳ ಸಂಘ, ಕೇಬಲ್ ಆಪರೇಟರ್ಸ್ ಸೇರಿದಂತೆ ಇನ್ನಿತರೆ ಖಾಸಗಿ ಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಆಗತ್ಯ ವಸ್ತುಗಳ ಲಭ್ಯತೆ ಬಿಟ್ಟರೆ ಇತರೆ ಸೇವೆಗಳು ಹಾಗೂ ಸಾರಿಗೆ ಸಂಪರ್ಕಗಳು ಬಹುತೇಕ ಸ್ತಬ್ಧಗೊಳ್ಳಲಿದೆ.
ನಾಳೆ ರಾಜ್ಯದಾದ್ಯಂತ ಬೃಹತ್ ಮುಷ್ಕರ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವ ಸೇವೆ ಇರುತ್ತದೆ ಹಾಗೂ ಯಾವುದು ಇಲ್ಲ ಎಂಬ ವಿವರ ಈ ಕೆಳಕಂಡಂತಿದೆ.
ಯಾವುದು ಇಲ್ಲ?
- ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್, ತಮಿಳುನಾಡು ಬಸ್ ಗಳ ಸೇವೆ ಇಲ್ಲ. ಹಾಗೂ ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ.
- ಲಾರಿಗಳ ಸಂಚಾರವಿಲ್ಲ.
- ಪೆಟ್ರೋಲ್ ಲಭ್ಯವಿಲ್ಲ, (ನಗರದ 450 ಪೆಟ್ರೋಲ್ ಬಂಕ್ ಸೇರಿ ರಾಜ್ಯದ 3.800 ಪೆಟ್ರೋಲ್ ಬಂಕ್ ಗಳು ನಾಳೆ ಬಂದ್)
- ಆಟೋ ಟ್ಯಾಕ್ಸಿಗಳ ಸಂಚಾರವಿಲ್ಲ.
- ಚಿತ್ರಮಂದಿರಗಳು ಹಾಗೂ ಮಾಲ್ ಇರುವುದಿಲ್ಲ.
- ಎಪಿಎಂಸಿ ಮಾರುಕಟ್ಟೆ, ವಾಣಿಜ್ಯ ಮಾರುಕಟ್ಟೆ ವಹಿವಾಟುಗಳು ಸ್ಥಗಿತಗೊಳ್ಳಲಿದೆ.
- ಸರ್ಕಾರಿ ಕಚೇರಿಗಳಿರುವುದಿಲ್ಲ.
- ಬ್ಯಾಂಕ್, ಹೋಟೆಲ್ ಗಳಿರುವುದಿಲ್ಲ.
- ಕೇಬರ್ ಆಪರೇಟರ್ಸ್ ಗಳ ಸಂಘಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ನಾಳೆ ತಮಿಳು ಚಾನೆಲ್ ಗಳು ರಾಜ್ಯದಲ್ಲಿ ಲಭ್ಯವಿರುವುದಿಲ್ಲ.
- ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ.
ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೆ?
- ಆಸ್ಪತ್ರೆಗಳು
- ವೈದ್ಯಕೀಯ ಸೇವೆಗಳು
- ಆ್ಯಂಬುಲೆನ್ಸ್ ಸೇವೆಗಳು
- ಔಷಧಿಗಳು, ಮೆಡಿಕಲ್ ಶಾಪ್ ಗಳು ತೆರೆದಿರುತ್ತವೆ. ಆದರೆ, ಪ್ರತಿಭಟನೆ ಬೆಂಬಲಿಸಿ ಕಪ್ಪು ಪಟ್ಟಿಯನ್ನು ಧರಿಸಲಿದ್ದಾರೆ.
- ಎಂದಿನಂತೆ ಹಾಲು ಮತ್ತು ದಿನಪತ್ರಿಗಳು ಲಭ್ಯ
- ಇನ್ನಿತರೆ ತುರ್ತು ಸೇವೆಗಳು ಲಭ್ಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.