ಬೆಂಗಳೂರು: ವಾಹನಗಳಿಗೆ ಬೆ೦ಕಿ ಹಚ್ಚುವ ಯುವಕರೇ ಎಚ್ಚರ... ಭಾವೋದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ನಿಮ್ಮ ಉಜ್ವಲ ಭವಿಷ್ಯ ನಿಮ್ಮ ಕೈಯ್ಯಾರೆ ನೀವೇ ಹಾಳು ಮಾಡಿಕೊಳ್ಳಬೇಡಿ ಎ೦ದು ಕಿಡಿಗೇಡಿಗಳಿಗೆ ಪೊಲೀಸರು ಕಿವಿಮಾತು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಪೊಲೀಸರು, "ಬೆ೦ಕಿ ಹಚ್ಚುವ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಸುತ್ತಮುತ್ತಲ ಕಟ್ಟಡಗಳಲ್ಲಿ ಸಿಸಿ ಕ್ಯಾಮರಾಗಳಿದ್ದರೆ ಅದರಲ್ಲೂ ರೆಕಾಡ್‍೯ ಆಗಿರುತ್ತದೆ. ಇದನ್ನೆಲ್ಲ ಪರಿಶೀಲಿಸಿ ನಿಮ್ಮ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಸಾರ್ವಜನಿಕ ಜೀವನಕ್ಕೆ ತೊಂದರೆ ಮಾಡುವಂತಹ ಇಂತಹ ಅಪರಾಧಗಳಿಗೆ ಬೇಗ ಜಾಮೀನು ಸಿಗುವುದಿಲ್ಲ. ವರ್ಷಗಟ್ಟಲೆ ಕೋರ್ಟ್ ಗೆ ಅಲೆಯಬೇಕಾಗುತ್ತದೆ. ನಿಮ್ಮನ್ನೇ ಅವಲ೦ಬಿಸಿರುವ ಪಾಲಕರು ತೊ೦ದರೆ ಅನುಭವಿಸುತ್ತಾರೆ. ದಾರಿ ತಪ್ಪಿಸುವವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎ೦ದು ಪೊಲೀಸರು ಎಚ್ಚರಿಸಿದ್ದಾರೆ.