ರಾಜ್ಯ

ಶಾಸಕನ ಪುತ್ರನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಿಸಿಲ್ಲ: ಪೊಲೀಸರ ಸ್ಪಷ್ಟನೆ

Manjula VN

ಹುಬ್ಬಳ್ಳಿ: ನವಲಗುಂದ ಶಾಸಕ ಎನ್.ಹೆಚ್.ಕೋಣರೆಡ್ಡಿ ಅವರ ಪುತ್ರ ಹಾಗೂ ಐವರ ವಿರುದ್ಧ ಉತ್ತರ ಕರ್ನಾಟಕ ಪೊಲೀಸರು ಯಾವುದೇ ರೀತಿಯ ಡಕಾಯಿತಿ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಪೊಲೀಸರು, ಬೆಂಗಳೂರಿನ ವ್ಯಕ್ತಿಯೊಬ್ಬರಿಂದ ದೂರು ದಾಖಲಾಗಿತ್ತು. ಶಾಸಕನ ಪುತ್ರನ ವಿರುದ್ಧ ಡಕಾಯಿತಿ ಪ್ರಕರಣವನ್ನು ದಾಖಲಿಸಿದ್ದರು. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆಂಬ ವಿಚಾರ ಇದೀಗ ತಿಳಿದುಬಂದಿದೆ. ಆಕಸ್ಮಿಕವಾಗಿ ಹಾಗೂ ತಪ್ಪು ಗ್ರಹಿಕೆಯ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ.

ಯುವರಾಜ್ ಲೋಕನಾಥನ್ ಎಂಬುವವರು ರಾಮನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ರಾಮನಗರದ ಕೆಲ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿ ನಮ್ಮಲ್ಲಿದ್ದ ರು.23 ಸಾವಿರ ಹಣವನ್ನು ಲೂಟಿ ಮಾಡಿದ್ದರೆಂದು ದೂರಿನಲ್ಲಿ ಹೇಳಿಕೊಂಡಿದ್ದರು.

ಪ್ರಕರಣ ಕುರಿತಂತೆ ಮಾಡನಾಡಿರುವ ದಾಂಡೇಲಿ ಸರ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಶಿವಾಜಿ ಕಲೋಜಿ ಅವರು, ಶಾಸಕನ ಪುತ್ರ ಹಾಗೂ ಆತನ ಗೆಳೆಯರ ವಿರುದ್ಧ ತಪ್ಪುಗ್ರಹಿಕೆಯಿಂದ ಪ್ರಕರಣವನ್ನು ದಾಖಲು ಮಾಡಲಾಗಿದೆ. ಪ್ರಕರಣವನ್ನು ಯಾವ ಕಾರಣಕ್ಕೆ ದಾಖಲು ಮಾಡಿದ್ದೇನೆಂಬುದು ದೂರುದಾರನಿಗೇ ತಿಳಿಯುತ್ತಿಲ್ಲ. ಇದೀಗ ದೂರುದಾರ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದಾನೆಂದು ಹೇಳಿದ್ದಾರೆ.

SCROLL FOR NEXT