ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರ್ಗಿ ರ‍್ಯಾಗಿಂಗ್ ಪ್ರಕರಣ: ಚಾರ್ಜ್'ಶೀಟ್ ಸಲ್ಲಿಸಿದ ಎಸ್ಐಟಿ

ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್ ಶೀಟ್ ನ್ನು...

ಕಲಬುರ್ಗಿ: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್ ಶೀಟ್ ನ್ನು ಸಲ್ಲಿಕೆ ಮಾಡಿದೆ.

ಕಲುಬುರ್ಗಿ ಡಿವೈಎಸ್ಪಿ ಜಾನ್ಹವಿ ಅವರ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ನಿನ್ನೆ ಸಲ್ಲಿಕೆ ಮಾಡಲಾಗಿರುವ ಚಾರ್ಜ್ ಶೀಟ್ ನಲ್ಲಿ ಲಕ್ಷ್ಮೀ, ಅಥಿರಾ, ಕೃಷ್ಣಪ್ರಿಯಾ, ಶಿಲ್ಪ ಮತ್ತು ರೈಸಾ ಬೇಗಂ, ಹಾಸ್ಟೆಲ್ ವಾರ್ಡನ್ ಸೇರಿ ಒಟ್ಟು 6 ಮಂದಿಯ ಹೆಸರು ಕೇಳಿಬಂದಿದೆ.

ಪ್ರಕರಣ ಸಂಬಂಧ ತನಿಖಾ ತಂಡ 4 ದಿಂಗಳ ಹಿಂದಷ್ಟೇ ಕೇರಳಗೆ ಭೇಟಿ ನೀಡಿತ್ತು. ಇದರಂತೆ ಸಂತ್ರಸ್ಥೆ ಅಶ್ವಥಿ ಸೇರಿದಂತೆ ಆಕೆಯ ತಾಯಿ, ಸಹೋದರಿ ಅಂಜಲಿ ಸೇರಿ ಒಟ್ಟು 14 ಮಂದಿಯ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಈ ಹಿಂದೆ ವಶಕ್ಕೆ ಪಡೆಯಲಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಜಾಮೀನು ಪಡೆದು ಇದೀಗ ಹೊರಗಿದ್ದಾರೆ.

ಹಿರಿಯ ವಿದ್ಯಾರ್ಥಿನಿಯರು ಟಾಯ್ಲೆಟ್ ಕುಡಿಸಿ ರ‍್ಯಾಗಿಂಗ್ ಮಾಡಿದ್ದರು ಎಂದು ಹೇಳಿ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

SCROLL FOR NEXT