ರಾಜ್ಯ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಡೆಂಗ್ಯು ರೋಗಿಗಳ ವಿಮೆ ಹಕ್ಕು ಕೋರಿಕೆ

Sumana Upadhyaya
ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಡೆಂಗ್ಯು ಜ್ವರಕ್ಕೆ ತುತ್ತಾದವರು ಮತ್ತು ಅದಕ್ಕೆ ಬಲಿಯಾದವರ ಸಂಖ್ಯೆ ಜಾಸ್ತಿಯಾಗಿದ್ದು, ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಚಿಕಿತ್ಸೆ ವೆಚ್ಚವನ್ನು ವಿಮಾ ಕಂಪೆನಿಗಳಿಂದ ಮರು ಪಾವತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.
2014ರಲ್ಲಿ ಕರ್ನಾಟಕದಲ್ಲಿ 3 ಸಾವಿರದ 358 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು ಇಬ್ಬರು ಮೃತಪಟ್ಟಿದ್ದರು. 2015ರಲ್ಲಿ 5 ಸಾವಿರದ 77 ಕೇಸುಗಳು ಮತ್ತು 9 ಸಾವಿನ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇಲ್ಲಿಯವರೆಗೆ 4 ಸಾವಿರದ 385 ಪ್ರಕರಣಗಳು ಮತ್ತು 6 ಸಾವು ಸಂಭವಿಸಿವೆ.
ಅಪೊಲೊ ಮುನಿಚ್ ಆರೋಗ್ಯ ವಿಮಾ ಕಂಪೆನಿಗೆ 2015-16ರಲ್ಲಿ 7 ಸಾವಿರ ಡೆಂಗ್ಯು ಪೀಡಿತರ ಅರ್ಜಿಗಳು ವಿಮಾ ಸೌಲಭ್ಯಕ್ಕಾಗಿ ಬಂದಿದ್ದು, ಅದರಲ್ಲಿ ಸಾವಿರಕ್ಕಿಂತ ಹೆಚ್ಚು ಅರ್ಜಿಗಳು ಈ ವರ್ಷ ಆಗಸ್ಟ್ ವರೆಗೆ ಬಂದಿವೆ. 375 ಪ್ರಕರಣಗಳು ಕರ್ನಾಟಕ ರಾಜ್ಯದ್ದಾಗಿದೆ.
ಇನ್ನೊಂದು ಇನ್ಸೂರೆನ್ಸ್ ಕಂಪೆನಿಯಾದ ಮ್ಯಾಕ್ಸ್ ಬೂಪಾಗೆ ಡೆಂಗ್ಯುಗೆ ತುತ್ತಾದವರ 2 ಸಾವಿರದ 646 ಅರ್ಜಿಗಳು ಬಂದಿದ್ದು ಅವುಗಳಲ್ಲಿ 850 ಅರ್ಜಿಗಳು ಈ ವರ್ಷ ಸೆಪ್ಟೆಂಬರ್ ವರೆಗೆ ಮತ್ತು ಕರ್ನಾಟಕದಿಂದ 155 ಮತ್ತು ಬೆಂಗಳೂರು ಒಂದರಿಂದಲೇ 141 ವಿಮೆ ಕೋರಿ ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಕಂಪೆನಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದು, ಮ್ಯಾಕ್ಸ್ ಬೂಪ ಹಾಗೆ ಆಗಿರುವುದರಿಂದ ಇದಕ್ಕೆ ಕಡಿಮೆ ಅರ್ಜಿ ಬಂದಿರಬಹುದು. 
ಡೆಂಗ್ಯು ಜ್ವರಕ್ಕೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಹೊರ ರೋಗಿಗಳಿಗೆ ಸಲಹಾ ವೆಚ್ಚ, ಪ್ಲೇಟ್ ಲೆಟ್ ಕೌಂಟ್ ಟೆಸ್ಟ್, ಆಂಟಿಬಯೋಟಿಕ್ ಎಂದು ಎರಡೂವರೆ ಸಾವಿರದಿಂದ 4 ಸಾವಿರದವರೆಗೆ ವೆಚ್ಚವಾಗುತ್ತದೆ.
SCROLL FOR NEXT