ಮೆಟ್ರೋ ರೈಲು ಸಂಚಾರ 
ರಾಜ್ಯ

ಮಾಲಿನ್ಯ ಪ್ರಮಾಣ ತಗ್ಗಿಸಿದ ನಮ್ಮ ಮೆಟ್ರೋ: ಅಂಕಿಅಂಶಗಳಿಂದ ಸಾಬೀತು

ನಮ್ಮ ಮೆಟ್ರೋ ನಗರದ ನಿವಾಸಿಗಳ ಮನ ಗೆದ್ದಿರುವುದು ಗೊತ್ತೇ ಇದೆ. ಬಿಎಂಟಿಸಿ ಬಸ್ಸು, ಆಟೋಗಳ...

ಬೆಂಗಳೂರು: ನಮ್ಮ ಮೆಟ್ರೋ ನಗರದ ನಿವಾಸಿಗಳ ಮನ ಗೆದ್ದಿರುವುದು ಗೊತ್ತೇ ಇದೆ. ಬಿಎಂಟಿಸಿ ಬಸ್ಸು, ಆಟೋಗಳ ಕಿರಿ ಕಿರಿ ಬೇಡ, ಟ್ರಾಫಿಕ್ ನ ರಗಳೆಯಿಂದ ಪಾರಾಗೋಣ ಅಂತ ಅನೇಕ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಸುಖಕರ ಪ್ರಯಾಣದ ಜೊತೆಗೆ ನಮ್ಮ ಮೆಟ್ರೋ ನಿಮ್ಮ ಆರೋಗ್ಯವನ್ನೂ ಸುಧಾರಿಸುತ್ತದಂತೆ. ಯಾರಿಗೆಲ್ಲಾ ಮೆಟ್ರೋ ರೈಲಿನ ಸಂಚಾರದ ಭಾಗ್ಯ ಸಿಗುತ್ತದೋ ಅವರು ಅದೃಷ್ಟವಂತರು ಎನ್ನಬಹುದು. ಅದು ಹೇಗಂತೀರಾ? 5 ತಿಂಗಳ ಹಿಂದೆ ಪೂರ್ವ-ಪಶ್ಚಿಮ ಕಾರಿಡಾರ್  ಮೆಟ್ರೋ ಸಂಚಾರ ಆರಂಭಗೊಂಡಾಗಿನಿಂದ ಈ ಮಾರ್ಗದಲ್ಲಿ ವಾಯುಮಾಲಿನ್ಯ ಮಟ್ಟ ಕಡಿಮೆಯಾಗಿದೆಯಂತೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ವಾಹನಗಳು ಹೊರಸೂಸುವ ಅಪಾಯಕಾರಿ ಅನಿಲಗಳಿಂದ ಉಸಿರಾಟದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಈ ಹೊಗೆ ಹೊರಸೂಸುವ ಪ್ರಮಾಣ ಕಡಿಮೆಯಾಗಿದೆಯಂತೆ.
ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮಧ್ಯೆ 18 ಕಿಲೋ ಮೀಟರ್ ಕಾರಿಡಾರ್ ಕಳೆದ ಏಪ್ರಿಲ್ 30ರಂದು ಸಂಚಾರಕ್ಕೆ ಮುಕ್ತಗೊಂಡಿತ್ತು. ಮೇಯಿಂದ ಆಗಸ್ಟ್ ವರೆಗೆ ಮೈಸೂರು ರಸ್ತೆ ಮತ್ತು ಮೆಜೆಸ್ಟಿಕ್ ಪ್ರದೇಶದಲ್ಲಿ  ವಾಹನಗಳಿಂದ ಹೊರಸೂಸುವ ಸಲ್ಫರ್ ಡಯಾಕ್ಸೈಡ್ ಮತ್ತು ಆಕ್ಸೈಡ್ಸ್ ಆಫ್ ನೈಟ್ರೋಜನ್ ಪ್ರಮಾಣ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 
ಸಲ್ಫರ್ ಡಯಾಕ್ಸೈಡ್ ನಿಂದ ಶ್ವಾಸಕೋಶದ ಸಮಸ್ಯೆಗಳು, ಮೂಗು ಕಟ್ಟುವುದು,ಕೆಮ್ಮು, ಸಾರಜನಕ ಆಕ್ಸೈಡುಗಳು ಶ್ವಾಸಕೋಶದ ಸಮಸ್ಯೆಗಳು, ಶೀತ, ತಲೆನೋವು ಮತ್ತು ಕಣ್ಣಿನ ಉಪದ್ರವ ಮಾಡುತ್ತವೆ. ಈ ರಾಸಾಯನಿಕ ಹೊಗೆಗಳ ಪ್ರಮಾಣ ಮೆಟ್ರೋ ರೈಲು ಆರಂಭಗೊಂಡಾಗಿನಿಂದ ಕಡಿಮೆಯಾಗಿದೆ.
ನಮ್ಮ ಮೆಟ್ರೋದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಮಂತ್ರಿ ಮಾಲ್ ನಿಂದ ಕೆಂಪೇಗೌಡ ಮೆಟ್ರೋ ಸ್ಟೇಷನ್ ವರೆಗೆ ಸಂಚಾರ ಮುಕ್ತಗೊಂಡರೆ ಇನ್ನಷ್ಟು ಮಾಲಿನ್ಯ ಕಡಿಮೆಯಾಗಬಹುದು ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮುಖ್ಯ ಪರಿಸರ ಅಧಿಕಾರಿ ಎಸ್. ನಂದಕುಮಾರ್, ಮೆಟ್ರೋ ಖಂಡಿತವಾಗಿಯೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಜುಲೈ, ಆಗಸ್ಟ್ ನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಲೂ ಮಾಲಿನ್ಯ ಕಡಿಮೆಯಾಗಿರಬಹುದು ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ