ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಜಲ ವಿವಾದ ತಿದ್ದುಪಡಿ ಕಾಯ್ದೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೊಟೀಸ್

ಅಂತರಾಜ್ಯ ಜಲ ವಿವಾದ ತಿದ್ದುಪಡಿಯ ಕಾಯ್ದೆ(ಐಎಸ್ ಡಬ್ಲ್ಯು)ಯ ಸೆಕ್ಷನ್ 6(2)ನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು...

ಕರ್ನಾಟಕ ಹೈಕೋರ್ಟ್
Sumana Upadhyaya
Updated On : 30 Sept 2016, 9:31 am
ಬೆಂಗಳೂರು: ಅಂತರಾಜ್ಯ ಜಲ ವಿವಾದ ತಿದ್ದುಪಡಿಯ ಕಾಯ್ದೆ(ಐಎಸ್ ಡಬ್ಲ್ಯು)ಯ ಸೆಕ್ಷನ್ 6(2)ನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರದ ಗೆಜೆಟೆಡ್ ನೋಟಿಫಿಕೇಶನ್ ಗೆ ಸಂಬಂಧಪಟ್ಟಂತೆ ನ್ಯಾಯಾಧೀಕರಣದ ತೀರ್ಮಾನವು ಸುಪ್ರೀಂ ಕೋರ್ಟ್ ಆದೇಶದ ತೀರ್ಪನಷ್ಟೇ ಪ್ರಬಲವಾಗಿರುತ್ತದೆ. ತಿದ್ದುಪಡಿಯನ್ನು 2002ರ ಆಗಸ್ಟ್ 6ರಂದು ಐಎಸ್ ಡಬ್ಲ್ಯುಡಿ ಕಾಯ್ದೆಯ ಸೆಕ್ಷನ್ 6(2)ರಲ್ಲಿ ಸೇರಿಸಲಾಗಿತ್ತು.
ಮಂಡ್ಯ ಜಿಲ್ಲೆಯ ರೈತ ಎಂ.ಮಂಜುನಾಥ್ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಮಂಡ್ಯ ಜಿಲ್ಲೆಯ ಪ್ರೊ.ಬಿ.ಶಿವಲಿಂಗಯ್ಯ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ನೋಟಿಫಿಕೇಶನ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

Advertisement

Advertisement

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ನೀಡಬೇಕೆಂದು ಆದೇಶ ನೀಡಿದ್ದಾರೆ.
ಅರ್ಜಿದಾರ ಪರ ಹಿರಿಯ ವಕೀಲ ನ್ಯಾಯಾಲಯದ ಮುಂದೆ ವಾದಿಸಿ, ಅಂತಾರಾಜ್ಯ ನೀರು ವಿವಾದ ಕಾಯ್ದೆಯ ಸೆಕ್ಷನ್ 6(2) ನಿಂದಾಗಿ ಕಾವೇರಿ ನೀರು ವಿವಾದ ಉಲ್ಭಣಗೊಂಡಿದ್ದು ಇದರಿಂದಾಗಿ ಸ್ಥಳೀಯ ಜನರು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿಗಳು ನಷ್ಟವಾಗುತ್ತಿವೆ, ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಜಲವಿವಾದ ಕಾಯ್ದೆ-1956ರ ಸೆಕ್ಷನ್ 6ಕ್ಕೆ ಉಪನಿಯಮ(2)ನ್ನು ಸೇರಿಸಿ ಕೇಂದ್ರ ಸರ್ಕಾರ 2002ರಲ್ಲಿ ತಿದ್ದುಪಡಿ ತಂದಿತ್ತು. ಸೆಕ್ಷನ್ 6(2)ರ ಪ್ರಕಾರ ನ್ಯಾಯಾಧಿಕರಣಗಳ ತೀರ್ಪು ಸುಪ್ರೀಂ ಕೋರ್ಟ್ ತೀರ್ಪಿಗೆ ಸಮನಾಗಿರುತ್ತದೆ. ಅದನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಲಾಗಿತ್ತು. ತಿದ್ದುಪಡಿ ಕಾಯ್ದೆ ಪ್ರಕಾರ ಅಗತ್ಯವೆನಿಸಿದಾಗ ಕಾವೇರಿ ನದಿ ನೀರು ಪಡೆಯುವ ನಮ್ಮ ಹಕ್ಕು ಕಳೆದುಕೊಂಡಿದ್ದೇವೆ ಎಂದು ಅರ್ಜಿಯಲ್ಲಿ ದೂರಿರುವ ಅರ್ಜಿದಾರರು, ಸೆಕ್ಷನ್ 6(2)ನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement