ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಬುಧವಾರದಿಂದ ಆರಂಭವಾಗಿರುವ ಪೂರ್ವ ಮುಂಗಾರು ಶುಕ್ರವಾರದವರೆಗೂ ಮುಂದುವರಿಯುವ ಸಾಧ್ಯತೆಯಿದೆ. ಗುರುವಾರ ಬೆಂಗಳೂರಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ ಎಂದು ವರುಣ ಮಿತ್ರ ಹೇಳಿದೆ. ಶುಕ್ರವಾರ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು ಮೋಡ ಕವಿದ ವಾತಾವರಣ ಇರಲಿದೆ.
ಕೋಲಾರ, ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ, ಬೆಂಗಳೂರಲ್ಲಿ ಸುಮಾರು 1 ಗಂಟೆ ಕಾಲ ಮಳೆಯಾಗಿದ್ದರೂ ತಾಪಮಾನದಲ್ಲಿ ಮಾತ್ರ ಬದಲಾವಣೆಯಿಲ್ಲ, ಮಳೆಯ ನಂತರ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಷ ಏರಿಕೆಯಾಗಲಿದೆ. ಬುಧವಾರ 33.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.