ರಿಯಾಲ್ಟಿ ವಂಚಕರಿಂದ 1 ಸಾವಿರ ಕೋಟಿ ರು ದೋಖಾ: ಬೆಂಗಳೂರು ಪೊಲೀಸರು
ಜನರಿಗೆ ಕಡಿಮೆ ಬೆಲೆಗೆ ನಿವೇಶನ ಮತ್ತು ಫ್ಲ್ಯಾಟ್ ನೀಡುವುದಾಗಿ ಹೇಳಿ ವಂಚಿಸಿರುವ ರಿಯಾಲ್ಟಿ ಕಂಪನಿ ವಿರುದ್ಧ ಪೊಲೀಸರು ತನಿಖೆ ಚುರುಕು ...
ಬೆಂಗಳೂರು: ಜನರಿಗೆ ಕಡಿಮೆ ಬೆಲೆಗೆ ನಿವೇಶನ ಮತ್ತು ಫ್ಲ್ಯಾಟ್ ನೀಡುವುದಾಗಿ ಹೇಳಿ ವಂಚಿಸಿರುವ ರಿಯಾಲ್ಟಿ ಕಂಪನಿ ವಿರುದ್ಧ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸಚಿನ್ ನಾಯಕ್ ಮತ್ತವನ ಸಹಚರರು ಸುಮಾರು 1 ಸಾವಿರ ಕೋಟಿಯಷ್ಟು ಹಣವನ್ನು ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೂಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ದೇಶ ಬಿಟ್ಟು ಹೋಗಲು ಯತ್ನಿಸುತ್ತಿದ್ದ ಟಿಜಿಸ್ ಗ್ರೂಪ್ ನಿರ್ದೇಶಕ ಕೆ.ಎಂ ಅನೂಪ್ ನನ್ನು ಪೋಲಿಸರು ಬಂಧಿಸಿದ್ದಾರೆ. ಆದರೆ ಸಚಿನ್ ನಾಯಕ್ ನ ಸಂಪರ್ಕ ಎಲ್ಲಿಂದೆಲ್ಲಿಗೆ ಹಬ್ಬಿದೆ ಎಂಬುದರ ಬಗ್ಗೆ ಪೊಲೀಸರಿಗೆ ತಿಳಿಯುತ್ತಿಲ್ಲ,
ದಾಖಲೆಗಳ ಮೂಲಕ ಬೇರೆ ಕಂಪನಿಗಳ ಮತ್ತು ಮೋಸಕ್ಕೊಳಗಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ, ಆದರೆ ಸಚಿನ್ ನಾಯಕ್ ಈ ದಗಲ್ ಬಾಜಿ ಸಂಸ್ಥೆಗೆ ನಿರ್ದೇಶಕನಾಗಿದ್ದ ಎಂಬುದನ್ನು ಸಾಬೀತು ಪಡಿಸಲು ಒಂದು ಬೋರ್ಡ್ ಕೂಡ ಇಲ್ಲವಾಗಿದೆ.
ನಕಲಿ ಕಂಪನಿಗಳ ಹೆಸರನ್ನಿಟ್ಟುಕೊಂಡು, ಜನರಿಗೆ ಕರೆ ಮಾಡಿ ಕಡಿಮೆ ಹಣಕ್ಕೆ ನಿವೇಶನ ನೀಡುವುದಾಗಿ ಹೇಳುತ್ತಿದ್ದ ಡ್ರೀಮ್ಸ್ ಇಂಡಿಯಾ ಕಂಪನಿಯ ವಿರುದ್ಧ ಇದುವರೆಗೆ 82 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.