ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದ ಮಾವು ಅಮೆರಿಕಾಗೆ ರಫ್ತು

ಅಮೆರಿಕನ್ನರ ಊಟದ ತಟ್ಟೆಗೆ ಸದ್ಯದಲ್ಲಿಯೇ ರಾಜ್ಯದ ರೈತರು ಬೆಳೆದ ಮಾವು ತಲುಪಲಿದೆ. ಈ ವರ್ಷ...

ಬೆಂಗಳೂರು: ಅಮೆರಿಕನ್ನರ ಊಟದ ತಟ್ಟೆಗೆ ಸದ್ಯದಲ್ಲಿಯೇ ರಾಜ್ಯದ ರೈತರು ಬೆಳೆದ ಮಾವು ತಲುಪಲಿದೆ. ಈ ವರ್ಷ ರಾಜ್ಯದಿಂದ 2,000 ಟನ್ ಗಳಷ್ಟು ಮಾವು ರಫ್ತಾಗುವ ಸಾಧ್ಯತೆಯಿದೆ. ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಅಮೆರಿಕಾಕ್ಕೆ ಮಾವು ರಫ್ತಾಗುತ್ತಿರುವುದು ಇದೇ ಮೊದಲ ಸಲ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (ಕೆಎಸ್ಎಂಡಿಎಂಸಿ) ಈ ತಿಂಗಳ 15ರ ನಂತರ ವಿಮಾನ ಮೂಲಕ ಮಾವುಗಳನ್ನು ಕಳುಹಿಸಲು ತಯಾರಿ ನಡೆಸುತ್ತಿದೆ.
ನಮ್ಮ ದೇಶದಲ್ಲಿ ಕರ್ನಾಟಕ ಮಾವು ಬೆಳೆಯುವ ಪ್ರಮುಖ ರಾಜ್ಯ. 16 ಜಿಲ್ಲೆಗಳಲ್ಲಿ ಸುಮಾರು 1.7 ಲಕ್ಷ ಹೆಕ್ಟೇರ್ ಗಳಲ್ಲಿ ಮಾವು ಬೆಳೆಯಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ರಾಮನಗರ ಜಿಲ್ಲೆಗಳಲ್ಲಿ ಮಾವು ಬೆಳೆ ಅಧಿಕ.
ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 7.5 ಲಕ್ಷ ಟನ್ ಮಾವು ಬೆಳೆಯುವ ಸಾಧ್ಯತೆಯಿದೆ. ಈ ವರ್ಷ ಮಾವು ಬೆಳೆ ಬೇಗನೆ ಫಸಲು ಬಂದಿದ್ದು ಸುಮಾರು 8.5 ಲಕ್ಷ ಟನ್ ಬೆಳೆ ಬರುವ ನಿರೀಕ್ಷೆಯಿದೆ. 
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕೆಎಸ್ ಎಂಡಿಎಂಸಿಯ ವ್ಯವಸ್ಥಾಪಕ ನಿರ್ದೇಶಕ ಕದ್ರೆಗೌಡ, ಕಳೆದ ವರ್ಷದವರೆಗೆ ರಾಜ್ಯದಿಂದ ಮಾವು ಇಂಗ್ಲೆಂಡ್, ಆಸ್ಟ್ರೇಲಿಯಾ, ಗಲ್ಫ್ ರಾಷ್ಟ್ರಗಳು ಮತ್ತು ಮಲೇಷಿಯಾಕ್ಕೆ ರಫ್ತಾಗುತ್ತಿದ್ದವು. ಈ ವರ್ಷ 10,000 ಟನ್ ಮಾವುಗಳನ್ನು ರಫ್ತು ಮಾಡುವ ಗುರಿಯಿದೆ. ಈಗಾಗಲೇ ಅಮೆರಿಕಾದಿಂದ 2,000 ಟನ್ ಮಾವಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ.
ಆಲ್ಫೋನ್ಸೊ, ಬಂಗನಪಲ್ಲಿ, ಕೇಸರ್ ಮತ್ತು ದಶೆರಿ ಮೊದಲಾದ ತಳಿಯ ಮಾವುಗಳನ್ನು ಅಮೆರಿಕಾಕ್ಕೆ ಕಳುಹಿಸಲಾಗುತ್ತದೆ. ಕಳೆದ ವರ್ಷ ಕೂಡ ಮಾವುಗಳನ್ನು ಅಮೆರಿಕಕ್ಕೆ ಕಳುಹಿಸಲಾಗಿತ್ತು. ಆದರೆ ಅವು ಸ್ಯಾಂಪಲ್ ಗಳಷ್ಟೆ ಎಂದರು.
ರಾಜ್ಯದಿಂದ ಅಮೆರಿಕಕ್ಕೆ ರಫ್ತಾಗುವ ಮಾವನ್ನು ತಜ್ಞರ ತಂಡವೊಂದು ಪರೀಕ್ಷಿಸಿ ಒಪ್ಪಿಗೆ ನೀಡಿದೆ. ಸಹಜವಾಗಿ ಮಾವುಗಳನ್ನು ಹಣ್ಣು ಮಾಡಿ ಅವು ಕೆಡದಂತೆ ಇಡಲಾಗುತ್ತದೆ. ಅಮೆರಿಕಾದಲ್ಲಿನ ಮಾವಿನ ವಿಶೇಷಣಗಳನ್ನು ಈಡೇರಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ದೇಶಕ್ಕೆ ರಫ್ತಾಗುವ ನಿರೀಕ್ಷೆಯಿದೆ. ದಕ್ಷಿಣ ಕೊರಿಯಾಕ್ಕೂ ಕಳುಹಿಸುವ ಯೋಜನೆಯಿದೆ ಎಂದರು.
ತೋಟಗಾರಿಕಾ ಇಲಾಖೆಯ ಹಣ್ಣು ವಿಭಾಗದ ಮಾಜಿ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಬೇರೆ ದೇಶಗಳಲ್ಲಿ ಸಿಗುವ ಮಾವುಗಳು ಬಣ್ಣ ಚೆನ್ನಾಗಿರುತ್ತದೆ. ಆದರೆ ಕರ್ನಾಟಕದ ಮಾವುಗಳಿಗೆ ರುಚಿ ಹೆಚ್ಚು. ಹೀಗಾಗಿ ಭಾರತದ ಮಾವುಗಳಿಗೆ ವಿದೇಶಗಳಲ್ಲಿ ಬೇಡಿಕೆಯಿದೆ. ಟೋಮ್ಮಿ ಅಟ್ಕಿನ್ಸ್ ಮಾವು(ಫ್ಲೋರಿಡಾ), ಕೈಟ್ಟ್(ಫ್ಲೋರಿಡಾ), ಕೆನ್ಸಿಂಗ್ಟನ್ ಮಾವು(ಆಸ್ಟ್ರೇಲಿಯಾ) ಮೊದಲಾದವು ವಿದೇಶಗಳಲ್ಲಿ ಸಿಗುವ ಕೆಲವು ಮಾವುಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT