ಬೆಂಗಳೂರು: ರೋಗಿಗಳನ್ನು ದಾಖಲು ಮಾಡಿಕೊಳ್ಳಲು ರಾಜ್ಯದ ಕೆಲವು ವೈದ್ಯಕೀಯ ಕಾಲೇಜುಗಳು ಲಜ್ಜೆಗೆಟ್ಟ ವಿಧಾನಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ತೆರೆದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ದೇಹದಲ್ಲಿ ಯಾವುದೇ ಗುರುತು ಕಂಡುಬರುತ್ತಿಲ್ಲ, ಆರೋಗ್ಯ ಸರಿಯಿಲ್ಲವೆಂದು ಕುಂಟು ನೆಪ ಹೇಳಿ ಬಂದು ದಾಖಲಾಗುತ್ತಾರೆ. ಅನಾಥಾಶ್ರಮದಿಂದ ಮಕ್ಕಳನ್ನು ಕರೆದುಕೊಂಡು ಬಂದ ಮಕ್ಕಳ ವಾರ್ಡ್ ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ತಪಾಸಣೆಯಿಂದ ತಿಳಿದುಬಂದಿದೆ.
ಇದರ ಪರಿಣಾಮ ಕರ್ನಾಟಕದ ಮೂರು ಖಾಸಗಿ ವೈದ್ಯಕೀಯ ಕಾಲೇಜುಗಳ ಸದಸ್ಯತ್ವ ನವೀಕರಿಸದಿರುವುದು. ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು, ದೇವನಹಳ್ಳಿಯ ಆಕಾಶ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕೋಲಾರದ ಸಂಭ್ರಮ್ ಮೆಡಿಕಲ್ ಕಾಲೇಜು. ಮೂಲ ಸೌಕರ್ಯ ಮತ್ತು ಇತರ ಕೊರತೆಯಿಂದಾಗಿ ಎರಡು ಸರ್ಕಾರಿ ಕಾಲೇಜುಗಳು ಸೇರಿದಂತೆ ಮೂರು ಕಾಲೇಜುಗಳ ಸದಸ್ಯತ್ವ ನವೀಕರಣವಾಗಿಲ್ಲ. ಅವುಗಳು ಚಾಮರಾಜನಗರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಕಾರವಾರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ವಿಜಯಪುರದ ಅಲ್ ಅಮೀನ್ ಕಾಲೇಜುಗಳಾಗಿವೆ.
ಕಾಲೇಜಿನ ರೋಗಿಗಳ ವಾರ್ಡ್ ಗಳಲ್ಲಿ ಆರೋಗ್ಯವಂತ ವ್ಯಕ್ತಿಗಳು ರೋಗಿಗಳಾಗಿ ಬಂದು ದಾಖಲಾಗಿರುವುದು ತಪಾಸಣೆ ವೇಳೆ ತಿಳಿದುಬಂದಿದೆ ಎಂದು ಸಮಿತಿ ತಿಳಿಸಿದೆ.
ಕಾರ್ಯಕಾರಿ ಸಮಿತಿಯ ವರದಿ ಪ್ರಕಾರ ಮುಂದಿನ ಎರಡು ವರ್ಷಗಳವರೆಗೆ ಈ ಕಾಲೇಜುಗಳ ಸದಸ್ಯತ್ವವನ್ನು ನವೀಕರಣ ಮಾಡಲಾಗುವುದಿಲ್ಲ. ಭಾರತೀಯ ವೈದ್ಯಕೀಯ ಮಂಡಳಿಯ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ.