ರಾಜ್ಯ

ನಕಲಿ ಅಂಗವಿಕಲತೆ ಪ್ರಮಾಣಪತ್ರ ಸಲ್ಲಿಕೆ ಪ್ರಕರಣ: ಆಯ್ಕೆ ಸಮಿತಿಯಲ್ಲಿದ್ದ ವಿದ್ಯಾರ್ಥಿಯ ತಂದೆ!

Manjula VN
ಬೆಂಗಳೂರು: ನಕಲಿ ಅಂಗವಿಕಲತೆ ಪ್ರಮಾಣಪತ್ರವನ್ನು ನೀಡಿ ವೈದ್ಯಕೀಯ ಸೀಟು ಪಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದ್ದು, ಆಯ್ಕೆ ಸಮಿತಿಯಲ್ಲಿ ವಿದ್ಯಾರ್ಥಿ ತಂದೆ ಕೂಡ ಇದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. 
ಡಾ.ಮಹೇಸ್ ಬಾಬು ಬೆಂಗಳೂರು ವೈದ್ಯಕೀಯ ಕಾಲೇಜಿನ ಇಂಜಿಯನಿಯರ್ ಪ್ರಾಧ್ಯಾಪಕರನಾಗಿದ್ದಾರು. ನಕಲಿ ಅಂಗವಿಕಲತೆ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದ ವಿದ್ಯಾರ್ಥಿಯ ತಂದೆಯಾಗಿದ್ದಾರೆ. 
ಅಂಗವಿಕಲರಿಗಾಗಿ ಮೀಸಲಿರಿಸುವ ಸೀಟಿಗಾಗಿ ವಿದ್ಯಾರ್ಥಿ ಬಂದಿದ್ದು, ಆಯ್ಕೆ ಸಮಿತಿಯಲ್ಲಿ ಬಾಲಕಿಯ ತಂದೆಯೇ ಹಾಜರಿರಲು ಹೇಗೆ ಸಾಧ್ಯವಾಗಿತು? ಎಂಬುದರ ಬಗ್ಗೆ ನಮಗೂ ಆಶ್ಚರ್ಯವಾಗುತ್ತಿದೆ. ವಿದ್ಯಾರ್ಥಿನಿ ಸೀಟು ಪಡೆಯಲು ಬಂದಾಗ ತಂದೆಯೇ ಆಯ್ಕೆ ಸಮಿತಿಯಲ್ಲಿದ್ದರೆ ಸೀಟು ಪಡೆಯುವುದು ಅತ್ಯಂತ ಸುಲಭವಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಶೀಘ್ರದಲ್ಲಿಯೇ ವಿದ್ಯಾರ್ಥಿನಿಯ ತಂದೆಗೆ ಇಲಾಖೆ ವತಿಯಿಂದ ನೋಟಿಸ್ ಜಾರಿಗೊಳಿಸಲಾಗುತ್ತದೆ. ಅಲ್ಲದೆ, ಮಹೇಶ್ ಬಾಬು ಅವರು ಅಮಾನತು ಶಿಕ್ಷೆ ಅಥವಾ ಸರ್ಕಾರದ ವತಿಯಿಂದ ಕಠಿಣ ಕ್ರಮ ಎದುರಿಸುವ ಸಾಧ್ಯತೆಗಳಿವೆ. ವಿದ್ಯಾರ್ಥಿನಿ ದೈಹಿಕವಾಗಿ ಆರೋಗ್ಯಕರವಾಗಿದ್ದು, ಇಂತಹ ವಿದ್ಯಾರ್ಥಿನಿಗೆ ನಕಲಿ ಅಂಕವಿಕಲತೆಯ ಪ್ರಮಾಣ ಪತ್ರವನ್ನು ಯಾರು ನೀಡಿದ್ದರು ಎಂಬುದು ಈ ವರೆಗೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ. 
ಅಂಗವಿಕಲತೆಯ ಮೀಸಲಾತಿ ಅಡಿಯಲ್ಲಿ ವೈದ್ಯಕೀಯ ಸೀಟು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವೈದ್ಯಕೀಯ ತಜ್ಞರ ಬಳಿ ಪ್ರಮಾಣಪತ್ರವೊಂದನ್ನು ಪಡೆದು ಸಲ್ಲಿಕೆ ಮಾಡಬೇಕಾಗುತ್ತದೆ. 
SCROLL FOR NEXT