ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ 2007ರ ಕರ್ನಾಟಕ ರಾಜ್ಯ ನಾಗರಿಕ ಸೇವೆ ಕಾಯ್ದೆ ನಿಯಮಗಳನ್ನು ಅನುಪ್ಠಾನಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರಶಂಸಿದೆ.
ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕರ್ನಾಟಕ ಸರ್ಕಾರದ ಕ್ರಮಕ್ಕೆ ಶ್ಲಾಘಿಸಿದರು. ಉಳಿದ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಆಗ್ರಹಿಸಲಾಗಿದೆ.
ಸರ್ವ ಶಿಕ್ಷಣ ಅಭಿಯಾನದಡಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಶಿಕ್ಷಕರ ವರ್ಗಾವಣೆ ಮಾಡುವಾಗ ಕರ್ನಾಟಕ ಅನುಸರಿಸಿದ ನೀತಿ ನಿಯಮಗಳನ್ನೇ ಅನುಸರಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸರ್ಕಾರಿ ಶಿಕ್ಷಕರ ವರ್ಗಾವಣೆ ಸಂಬಂದ 2007 ರಲ್ಲಿ ಜಾರಿಗೆ ತಂದ ಕಾಯಿದೆ ಅನುಸಾರವೇ ಇದುವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಸ್ಥಳೀಯ ಶಾಸಕರ ಸಚಿವರ , ರಾಜಕೀಯ ಮುಖಂಡರ ಶಿಫಾರಸು ಪತ್ರದ ಆಧಾರದ ಮೇಲೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ.
ವಿಶ್ವೇಶ್ವರ ಹೆಗಡೆ ಕಾವೇರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚವರಾಗಿದ್ದಾಗ ಶಿಕ್ಷಕರ ವರ್ಗಾವಣೆ ಸಂಬಂಧ ನಿಯಮ ಜಾರಿಗೆ ತಂದರು. ಈ ಮೊದಲು ಕೇವಲ ಶೇ,5 ರಷ್ಟು ಶಿಕ್ಷಕರು ಮಾತ್ರ ವರ್ಗಾವಣೆಗೆ ಅರ್ಹರಾಗಿದ್ದರರು. ನಂತರ ಕಿಮ್ಮನೆ ರತ್ನಾಕರ್ ಸಚಿವರಾದ ಸಂದರ್ಭದಲ್ಲಿ ಶೇ. 5 ರಷ್ಟಿದ್ದ ಶಿಕ್ಷಕರ ವರ್ಗಾವಣೆಯನ್ನು ಶೇ. 8 ಕ್ಕೇರಿಸಿದರು.