ರಾಜ್ಯ

1ನೇ ತರಗತಿ ದಾಖಲಾತಿಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಪರೀಕ್ಷೆ!

Shilpa D
ಬೆಂಗಳೂರು: ನಗರದ ಕೆಲ ಶಾಲೆಗಳಲ್ಲಿ 1ನೇ ತರಗತಿ ಮತ್ತು ನರ್ಸರಿಗೆ ದಾಖಲಾಗುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತಿವೆ ಎಂದು ಆರೋಪಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ( ಆರ್ ಟಿ ಇ) ಮಕ್ಕಳ ದಾಖಲಾತಿ ನಿಷೇಧಿಸಲು ಶಾಲೆಗಳು ಪ್ರವೇಶ ಪರೀಕ್ಷೆ ನಡೆಸುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ  ಪೋಷಕರಿಂದ ದೂರುಗಳು ಬಂದಿದ್ದು, ಈ ಸಂಬಂಧ  ಶಾಲೆಗಳಿಗೆ ನೊಟೀಸ್ ನೀಡಲಾಗಿದೆ. 
ಬೆಂಗಳೂರಿನ ಕೆಲವು ಶಾಲೆಗಳು 1ನೇ ತರಗತಿ ದಾಖಲಾತಿಗಾಗಿ  ಪ್ರವೇಶ ಪರೀಕ್ಷೆ ನಡೆಸಿವೆ ಎಂದು ಪೋಷಕರೊಬ್ಬರು ಬರೆದಿದ್ದಾರೆ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ, ಎಂದು ದೂರಿರುವ ಪೋಷಕರು 2 ಶಾಲೆಯ ಹೆಸರುಗಳನ್ನು ನಮೂದಿಸಿದ್ದಾರೆ. ನನ್ನ ಮಗನನ್ನು ಕರೆದುಕೊಂಡು ಶಾಲೆಗೆ ಹೋಗಿದ್ದೆ, ಆದರೆ ವೈಟ್ ಫೀಲ್ಡ್ ನ 2 ಶಾಲೆಗಳು ವಿದ್ಯಾರ್ಥಿ ಪ್ರವೇಶ ಪರೀಕ್ಷೆ ಬರೆದು ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದರು ಎಂದು ಪೋಷಕರೊಬ್ಬರು ಹೇಳಿದ್ದಾರೆ.
ನಗರದ ಹಲವು ಶಾಲೆಗಳಲ್ಲಿ ಸಂದರ್ಶನ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ, ಆದರೆ ಈ ಕ್ರಮಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದಾರೆ. 
ನಾವು ನೀಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲೇಬೇಕೆಂಬ ನಿಯಮವಿಲ್ಲ, ಮಕ್ಕಳ ಮೂಲ ಜ್ಞಾನದ ಮಟ್ಟ ತಿಳಿದುಕೊಳ್ಳಲು ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಯಾವುದೇ ಸಂದರ್ಶನ ಮಾಡುವುದಿಲ್ಲ, ಹಣ್ಣುಗಳು, ಬಣ್ಣಗಳು ಪ್ರಾಣಿಗಳ ಗುರುತು ಕೇಳುತ್ತೇವೆ ಎಂದು ದಕ್ಷಿಣ ಬೆಂಗಳೂರಿನ ಶಾಲೆಯೊಂದರ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
SCROLL FOR NEXT