ಬೆಂಗಳೂರು: ವಿಐಪಿ ಸಂಸ್ಕೃತಿಯ ಪ್ರತೀಕದಂತಿರುವ, ಸರ್ಕಾರಿ ವಾಹನಗಳ ಮೇಲೆ ಕೆಂಪುಗೂಟ ಬಳಸುವ ದಶಕಗಳ ಸಂಪ್ರಾದಯಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು ಬಿಟ್ಟಿರುವ ಹಿನ್ನಲೆಯಲ್ಲಿ, ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಚಿಹ್ನೆಯಾಗಿದ್ದ ಕೆಂಪು ದೀಪಗಳು ಶೀಘ್ರದಲ್ಲಿಯೇ ಕಣ್ಮರೆಯಾಗಲಿದೆ.
ಈ ಹಿಂದೆ ವಾಹನಗಳ ಮೇಲೆ ಕೆಂಪು ದೀಪ ಬಳಸಲು ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಸಚಿವರಿ, ವಿಧಾನ ಪರಿಷತ್ ಮುಖ್ಯಸ್ಥರು, ವಿಧಾನಸಭಾ ಸ್ಪೀಕರ್, ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್ ನ್ಯಾಯಾಧೀಶಗರಿಗೆ ಅನುಮತಿ ನೀಡಲಾಗಿತ್ತು. ಸೂಚನೆಯ ನಡುವೆಯೂ ಇತರ ಹುದ್ದೆಗಳಲ್ಲಿರುವ ಅಧಿಕಾರಿಗಳು, ಶಾಸಕರು ವಿಶ್ವವಿದ್ಯಾಲಯದ ಉಪ ಕುಲಪತಿಗಳು, ಜಿಲ್ಲಾ ನ್ಯಾಯಾಧೀಶರು, ಮೇಯರ್ ಗಳು, ಕಾರ್ಪೋರೇಟರ್ ಗಳು ಮತ್ತು ಪಂಚಾಯತ್ ಅಧ್ಯಕ್ಷರು, ಧಾರ್ಮಿಕ ನಾಯಕರೂ ಕೂಡ ತಮ್ಮ ತಮ್ಮ ವಾಹನಗಳ ಮೇಲೆ ಕೆಂಪು ದೀಪಗಳನ್ನು ಬಳಕೆ ಮಾಡುತ್ತಿದ್ದರು.
ಅಧಿಕಾರಿಗಳ ಬಗ್ಗೆ ಅರಿವಿಲ್ಲ ಪೊಲೀಸರು ಕೆಂಪು ದೀಪ ಕಾಣುತ್ತಿದ್ದಂತೆಯೇ ರಸ್ತೆಗಳು ಇಕ್ಕಟ್ಟಾಗಿದ್ದರೂ ಅಧಿಕಾರಿಗಳ ಸಂಚಾರಕ್ಕಾಗಿ ವಾಹನಮುಕ್ತ ರಸ್ತೆಯಾಗಿಸುತ್ತಿದ್ದರು. ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ಕೇಂದ್ರ ಸರ್ಕಾರ ಅಂತ್ಯ ಹಾಡಿದೆ.
ಈ ಬಗ್ಗೆ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಕೆಂಪು ದೀಪ ಉಲ್ಲಂಘನೆ ಕುರಿತಂತೆ ಈ ವರೆಗೂ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಂಡಿಲ್ಲ. ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಪೊಲೀಸರಿಗೆ ಆಯ್ಕೆಯನ್ನುಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಸಾಕಷ್ಟು ಅಧಿಕಾರಿಗಳು ಹಾಗೂ ರಾಜಕೀಯ ನಾಯಕರೂ ಕೆಂಪು ದೀಪವನ್ನು ತಮ್ಮ ಪ್ರತಿಷ್ಠೆಯ ಚಿಹ್ನೆಯೆಂದೇ ಭಾವಿಸುತ್ತಾದರೆ. ಮೇ. 1 ರಿಂದ ಎಲ್ಲಾ ಅಧಿಕಾರಿಗಳು ತಮ್ಮ ವಾಹನಗಳ ಮೇಲಿರುವ ಕೆಂಪು ದೀಪವನ್ನು ಕಿತ್ತುಹಾಕಲೇ ಬೇಕು. ರಾಜ್ಯ ಸರ್ಕಾರಗಳೂ ಕೂಡ ಕೆಂಪು ದೀಪ ಬಳಕೆಗೆ ನಿಷೇಧ ಹೇರಬೇಕಿದೆ ಎಂದು ರಾಜ್ಯ ಸರ್ಕಾರಿ ಚಾಲಕರ ಸಂಘದ ಅಧ್ಯಕ್ಷ ಎಂ.ಎನ್. ವೇಣುಗೋಪಾಲ್ ಅವರು ಹೇಳಿದ್ದಾರೆ.
ಇನ್ನು ಸುಪ್ರೀಂಕೋರ್ಟ್ ಕೆಂಪು ದೀಪ ಬಳಕೆ ಕುರಿತಂತೆ ಆದೇಶವನ್ನು ಹೊರಡಿಸಿದ್ದರೂ, ವಾಹನಗಳ ಮೇಲೆ ಬಳಕೆ ಮಾಡುವ ಕೆಂಪು ದೀಪಗಳನ್ನು ಸ್ಥಳೀಯ ಅಂಗಡಿಗಳು ಎಗ್ಗಿಲ್ಲದೆ ಮಾರಾಟ ಮಾಡುತ್ತಿವೆ. ಹೆಚ್ಚಿಗೆ ಯಾರು ದುಡ್ಡು ಕೊಡುತ್ತಾರೋ ಆ ವ್ಯಕ್ತಿಗಳಿಗೆ ಕೆಂಪು ದೀಪಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರದ ಜೆಸಿ ರಸ್ತೆ ಮತ್ತು ಶಿವಾಜಿನಗರಲ್ಲಿ ರೂ.750 ರಿಂದ 1500ರ ವರೆಗೂ ಕೆಂಪು ದೀಪಗಳು ದೊರೆಯುತ್ತಿವೆ. ನಮ್ಮ ಬಳಿ ಪೊಲೀಸರ ಕಾರಿಗೆ ಬಳಸುವ ದೀಪಗಳೂ ಕೂಡ ಸಿಗುತ್ತವೆ. ದೀಪಗಳ ಬೆಲೆಗಳು ರೂ.15,000ಕ್ಕಿಂತಲೂ ಹೆಚ್ಚಿದೆ ಎಂದು ಜೆಸಿ ರಸ್ತೆಯ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಇದಲ್ಲದೆ ವಾಣೀಜ್ಯೇತರ ಪ್ರದೇಶಗಳಲ್ಲೂ ಕೆಂಪು ದೀಪಗಳ ಮಾರಾಟ ಮಾಡಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos