ಬೆಂಗಳೂರು: ಸುಂದರವಾಗಿರುವ ಹುಡುಗಿಯನ್ನು ಮದುವೆಯಾಗಬೇಕೆಂಬ ಆಸೆ ಯುವಕರ ಕನಸಾಗಿರುತ್ತದೆ. ಆದರೆ ಇಲ್ಲೊಬ್ಬ ಭೂಪ ತನ್ನ ಪತ್ನಿ ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ತಲೆಯನ್ನು ಬೋಳಿಸಿ, ಹಲ್ಲೆ ಮಾಡಿ ವಿರೂಪಗೊಳಿಸಿರುವ ಹೀನ ಕೃತ್ಯ ಕೆಜಿ ಹಳ್ಳಿಯಲ್ಲಿ ನಡೆದಿದೆ.
ತನ್ನ ಪತ್ನಿಯನ್ನು ಪರ ಪುರುಷರು ನೋಡಬಾರದು ಹಾಗೂ ಆಕೆ ಕೆಲಸಕ್ಕೆ ಹೋಗಬಾರದು ಎಂದು ಪತಿಯೇ ಪತ್ನಿಯ ತಲೆ ಬೋಳಿಸಿದ್ದಾರೆ. ಮಹಿಳೆ ವಿವಾಹಕ್ಕೂ ಮುನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಮದುವೆ ನಂತರ ಆಕೆ ಕೆಲಸಕ್ಕೆ ಹೋಗುವುದನ್ನು ಗಂಡ ತೀವ್ರವಾಗಿ ವಿರೋಧಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳ ಸಹ ನಡೆದಿದೆ.
ಕೆಲಸಕ್ಕೆ ಹೋಗಬಾರದು ಎಂಬ ತನ್ನ ಒತ್ತಾಯಕ್ಕೆ ಮಣಿಯದ ಪತ್ನಿಯ ಸೌಂದರ್ಯವನ್ನು ವಿರೂಪಗೊಳಿಸಿದರೆ ಕೆಲಸಕ್ಕೆ ಹೋಗುವುದಿಲ್ಲ ಎಂದು ಭಾವಿಸಿ ಆಕೆಯ ತಲೆ ಬೋಳಿಸಿ. ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ, ಮಹಿಳೆ ವನಿತಾ ಸಹಾಯವಾಣಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ಇಂತಹ ನೀಚ ಗಂಡ ನನಗೆ ಬೇಡ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಸಹ ಇದ್ದಾನೆ ಎಂದು ತಿಳಿದುಬಂದಿದೆ.