ರಾಜ್ಯ

ಪಿಯು ವಾಣಿಜ್ಯ ವಿಷಯದ ಪಠ್ಯ ಪುಸ್ತಕಗಳು ಈಗ ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯ

Srinivas Rao BV
ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಲಭ್ಯವಿರಲಿದೆ. 
ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎನ್ ಸಿಇಆರ್ ಟಿ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, 2017-18 ಶೈಕ್ಷಣಿಕ ವರ್ಷದಿಂದ ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ ಮತ್ತು ಬ್ಯುಸಿನೆಸ್ ವಿಷಯಗಳಿಗೆ ಸಂಬಂಧಿಸಿದ ಇಂಗ್ಲೀಷ್ ಹಾಗೂ ಕನ್ನಡ ಮಾಧ್ಯಮಗಳ ಪಠ್ಯ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಇಲಾಖೆಯ ನಿರ್ದೇಶಕಿ ಸಿ ಶಿಖಾ ಹೇಳಿದ್ದಾರೆ. 
ಇದೇ ಮೊದಲ ಬಾರಿಗೆ ಪಿಯುಇ ಇಲಾಖೆ ಎನ್ ಸಿಇಆರ್ ಟಿ ಶಿಫಾರಸು ಮಾಡಿರುವ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ವಿಜ್ಞಾನ ಪಠ್ಯಪುಸ್ತಕಗಳನ್ನು 2013-14 ನೇ ಶೈಕ್ಷಣಿಕ ವರ್ಷದಲ್ಲಿ ಎನ್ ಸಿಇಆರ್ ಟಿ ಪಠ್ಯಪುಸ್ತಕಗಳನ್ನು ಅಳವಡಿಸಿಕೊಂಡಿತ್ತು. ಹೊಸದಾಗಿ ಅಳವಡಿಕೆ ಮಾಡಿಕೊಂಡಿರುವ ಪಠ್ಯಪುಸ್ತಕಗಳ ಬಗ್ಗೆ ಪ್ರಾಧ್ಯಾಪಕರಿಗೆ 15 ದಿನ ತರಬೇತಿ ನೀಡಲಾಗುತ್ತದೆ, ಮೇ 15 ರಿಂದ ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳ ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುತ್ತದೆ, ತರಬೇತಿ ಪಡೆಯುವ ಪ್ರಾಧ್ಯಾಪಕರಿಗೆ ಪ್ರತಿ ದಿನ 500 ರೂ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. 
SCROLL FOR NEXT