ಸಂಗ್ರಹ ಚಿತ್ರ 
ರಾಜ್ಯ

ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ತೊಂದರೆ ಇಲ್ಲ: ಸಾರಾಗೋವಿಂದು

ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ತೊಂದರೆಯಾಗಿಲ್ಲ. ಒಂದು ವೇಳೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರೆ ಖಂಡಿತಾ ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನ ತಡೆಯಲಾಗುತ್ತದೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ತಿಳಿಸಿದ್ದಾರೆ.

ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ತೊಂದರೆಯಾಗಿಲ್ಲ. ಒಂದು ವೇಳೆ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದರೆ ಖಂಡಿತಾ ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನ ತಡೆಯಲಾಗುತ್ತದೆ ಎಂದು  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸತ್ಯರಾಜ್ ಕ್ಷಮೆ ಯಾಚನೆ ಬಳಿಕ ತಮಿಳುನಾಡಿನವಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಲಾಗಿದೆ ಎಂಬ ವರದಿಗಳು  ಕೇಳಿಬಂದಿದ್ದವು. ಈ ಬಗ್ಗೆ ದಕ್ಷಿಣ ಭಾರತ ಚಲನಚಿತ್ರ ಒಕ್ಕೂಟವನ್ನು ನಾನು ಸಂಪರ್ಕಿಸಿ ಮಾತನಾಡಿದ್ದೆ. ಈ ವೇಳೆ ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ  ಎಂದು ಸಂಸ್ಥೆಯ ಪದಾಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ವೇಳೆ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಲ್ಲಿ ತೊಂದರೆಯಾದ ಕುರಿತು ತಮಗೆ ತಿಳಿದರೆ ಖಂಡಿತ ಕರ್ನಾಟಕದಲ್ಲಿಯೂ ತಮಿಳು ಚಿತ್ರ ಪ್ರದರ್ಶನ ತಡೆಯಲಾಗುತ್ತದೆ  ಎಂದು ಅವರು ಎಚ್ಚರಿಕೆ ನೀಡಿದರು.

ತಮಿಳು ಚಿತ್ರದ ಪೋಸ್ಚರ್ ಹರಿದ ಪ್ರತಿಭಟನಾಕಾರರು
ಇನ್ನು ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನ ತಡೆಯಲಾಗಿದೆ ಎಂಬ ವರದಿ ಮೇರೆಗೆ ಕರ್ನಾಟಕದಲ್ಲೂ ತಮಿಳು ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಲು ಕೆಲ ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ  ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ಸಂಜಯ್ ನಗರದಲ್ಲಿರುವ ಪುಷ್ಪಾಂಜಲಿ ಥಿಯೇಟರ್ ಆವರಣದಲ್ಲಿ ಹಾಕಲಾಗಿದ್ದ ತಮಿಳು ಚಿತ್ರವೊಂದರ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR: ‘ಜ್ಞಾನೇಶ್ ಕುಮಾರ್ ಬಿಜೆಪಿಯ ಅಸ್ತ್ರ, SIR ರದ್ದುಪಡಿಸಿ': ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆಗೆ ಠಾಕ್ರೆ ಸೋದರ ಸಂಬಂಧಿಗಳ ಆಗ್ರಹ!

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ, ಓರ್ವ ಸಾವು, ಹಲವರಿಗೆ ಗಾಯ! Video

‘ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು’: 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!

2006ರ KSTP ಯೋಜನೆ ಪ್ರಕರಣ: CEC ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ಆದೇಶ

ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ 'One8' ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video