ಚಿಕ್ಕಬಳ್ಳಾಪುರ: ತಾಯಿಯೇ ತನ್ನ 16 ತಿಂಗಳ ಮಗುವನ್ನು ಸೀಮೆ ಎಣ್ಣೆ ಹಾಕಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಗುವನ್ನು ಸೀಮೆ ಎಣ್ಣೆ ಸುರಿದು ಹತ್ಯೆ ಮಾಡಿರುವುದರ ಬಗ್ಗೆ ಸ್ವತಃ ತಾಯಿಯೇ ಹೇಳಿಕೆ ನೀಡಿದ್ದು, ಅತಿಮಾನುಷ ಶಕ್ತಿ ಆವಾಹನೆಯಾಗಿದ್ದರಿಂದ ಹೀಗೆ ಮಾಡಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಕೆಸವಾರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋರ್ ವೆಲ್ ಮೆಕ್ಯಾನಿಕ್ ನ ಮಡದಿ ನಿರ್ಮಲ(28) ಮಗುವನ್ನು ಹತ್ಯೆ ಮಾಡಿರುವ ತಾಯಿಯಾಗಿದ್ದು, ಮಗುವನ್ನು ಹತ್ಯೆ ಮಾಡಿರುವುದರ ಬಗ್ಗೆ ತನ್ನ ಪತಿಗೆ ತಿಳಿಸಿದ್ದಾರೆ. ನಂತರ, ಘಟನೆ ನಡೆದಿರುವ ಬಗ್ಗೆ ಬೋರ್ ವೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ತಮ್ಮ ಪತ್ನಿಗೆ ಈ ಹಿಂದೆಯೂ ಅತಿಮಾನುಷ ಶಕ್ತಿ ಆವಾಹನೆಯಾದ ಉದಾಹರಣೆಗಳಿವೆ ಎಂದು ಪತಿ ತಿಳಿಸಿದ್ದು, ಬನಶಂಕರಿ ದೇವತೆಯ ಆರಾಧಕರಾಗಿರುವ ಇಬ್ಬರೂ 6 ವರ್ಷಗಳ ಹಿಂದೆ ವಿವಾಹವಾಗಿದ್ದರು.