ರಾಜ್ಯ

ಪಠ್ಯ ಪುಸ್ತಕ ಸೇರಲಿದೆ ವರನಟ ಡಾ. ರಾಜ್‌ ಕುಮಾರ್ ಜೀವನ

Lingaraj Badiger
ಬೆಂಗಳೂರು: ವರನಟ, ನಟಸಾರ್ವಭೌಮ ಡಾ. ರಾಜ್‌ ಕುಮಾರ್ ಅವರ ನಡೆ-ನುಡಿ ಸೇರಿದಂತೆ ಅವರ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸೋಮವಾರ ಹೇಳಿದ್ದಾರೆ.
ಇಂದು ಡಾ. ರಾಜ್ ಕುಮಾರ್ ಅವರ 89ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ರಾಜ್‌ ಕುಮಾರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ರಾಜ್ ಕುಮಾರ್ ಅವರು ಒಬ್ಬ ಅಪ್ರತಿಮ ಕಲಾವಿದರು. ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರಲ್ಲಿ ಡಾ. ರಾಜ್ ಕುಮಾರ್ ಸಹ ಒಬ್ಬರು. ರಂಗಭೂಮಿ ಮತ್ತು ಚಿತ್ರರಂಗಕ್ಕೆ ರಾಜ್ ಕುಮಾರ್ ಕೊಡುಗೆ ಅಪಾರ. ಯುವ ಪೀಳಿಗೆಗೆ ಡಾ. ರಾಜ್ ಕುಮಾರ್ ಮಾದರಿ. ಹೀಗಾಗಿ, ಮುಂದಿನ ವರ್ಷದಿಂದ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯನ್ನ ಪಠ್ಯ ವಿಷಯದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದರು.
ರಾಜ್ ಕುಮಾರ್ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಸರ್ಕಾರದ ಪರವಾಗಿ ಗೃಹ ಸಚಿವ ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಶಾಸಕ ಮುನಿರತ್ನ ಅವರು ಸೇರಿದಂತೆ ಹಲವು ಗಣ್ಯರು ರಾಜ್ ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದರು.
SCROLL FOR NEXT