ರಾಜ್ಯ

ಬೆಳಗಾವಿ: ನೀರಿಲ್ಲದೆ ಒಣಗಿ ನಿಂತಿವೆ 10ಸಾವಿರ ಕೊಳವೆ ಬಾವಿಗಳು

Shilpa D
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 45 ಸಾವಿರ ಬೋರ್ ವೆಲ್ ಗಳಿಗೆ. ಅದರಲ್ಲಿ  2015-16ನೇ ಸಾಲಿನಲ್ಲಿ  10 ಸಾವಿರಕ್ಕಿಂತಲೂ ಹೆಚ್ಚಿನ ಬೋರ್ ವೆಲ್ ಗಳು ನೀರಿಲ್ಲದೇ ಒಣಗಿ ಹೋಗಿವೆ ಆದರೆ ಈ ಕೊಳವೆ ಬಾವಿಗಳ ಪ್ರಸಕ್ತ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯಿಲ್ಲ.
ಅಂತರ್ಜಲ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಡಿಮೆ ಸಂಖ್ಯೆಯಲ್ಲಿ ಬೋರ್ ವೆಲ್ ಗಳು ಕೊರೆಯಲ್ಪಟ್ಟಿದ್ದವು. 2014-15 ರಲ್ಲಿ 5 ಸಾವಿರ, 2015-16 ರಲ್ಲಿ 3,500 2016-17 ಮಾರ್ಚ್ ವರೆಗೆ 1ಸಾವಿರ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
ಬರ ಪೀಡಿತ ಅಥಣಿ, ಚಿಕ್ಕೋಡಿ, ರಾಯಬಾಗ್, ಹುಕ್ಕೇರಿ, ಗೋಕಾಕ್, ರಾಮದುರ್ಗ, ಸವದತ್ತಿ, ಕಿತ್ತೂರು ಸೇರಿದಂತೆ ಹಲವು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದ್ದು, ಶೇ. 45 ರಷ್ಟು ಬೋರ್ ವೆಲ್ ಗಳು ಒಣಗಿ ಹೋಗಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಮ್ ಹೇಳಿದ್ದಾರೆ.
ಪಿಡಿಒಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕೊಳವೆ ಬಾವಿಗಳ ಸಮೀಕ್ಷೆ ನಡೆಸಿದ್ದಾರೆ, ಅದರಲ್ಲಿ ಯಾವುದಾದರೂ ಬೋರ್ ವೆಲ್ ಮುಚ್ಚದೇ ಇರುವುದು ಕಂಡು ಬಂದರೇ ಅದಕ್ಕೆ ಅವರೇ ಬವಾಬ್ದಾರರು ಎಂದು ಹೇಳಿದ್ದಾರೆ.
ಕಳೆದ 3 ವರ್ಷಗಳಲ್ಲಿ ನೀರಿಲ್ಲದೇ ಒಣಗಿದ ಹಾಗೂ ನೀರು ಸಿಗದೇ ವಿಫಲವಾದ ಸುಮಾರು 11,911 ಬೋರ್ ವೆಲ್ ಗಳನ್ನು ಮುಚ್ಟಿಸಲಾಗಿದೆ ಎಂದು ಗ್ರಾಮೀಣ ನೀರು ಪೂರೈಕೆ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕ ರಾಯ್ಕರ್ ತಿಳಿಸಿದ್ದಾರೆ. 
SCROLL FOR NEXT