ಮೈಸೂರು: ಮುಕ್ತ ಫೋನ್ ಸೌಲಭ್ಯವನ್ನು ಕೆಲವು ಕಾರ್ಪೊರೇಟರ್ ಗಳು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆಯ ಕಾರ್ಪೊರೇಟರ್ ಗಳ ಕಚೇರಿ ಮೊಬೈಲ್ ಗಳ ಸಂಪರ್ಕ ಕಡಿತಗೊಳಿಸಲಾಗಿದೆ.
ಇತ್ತೀಚೆಗೆ ಕೆಲವು ಕಾರ್ಪೊರೇಟರ್ ಗಳು ಮೊಬೈಲನ್ನು ದುರುಪಯೋಗಪಡಿಸಿಕೊಳ್ಳುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಕಳೆದ ಎರಡು ತಿಂಗಳಲ್ಲಿ ಕೆಲವು ಕಾರ್ಪೊರೇಟರ್ ಗಳ ಮೊಬೈಲ್ ಬಿಲ್ ಗಳು 1 ಲಕ್ಷವನ್ನು ದಾಟಿದ್ದವು. ಇಬ್ಬರು ಕಾರ್ಪೊರೇಟರ್ ಗಳು ಐಎಸ್ ಡಿ ಕರೆಗಳನ್ನು ಮಾಡುತ್ತಿದ್ದು ಇದರಿಂದ ಬಿಲ್ ವಿಪರೀತ ಏರಿಕೆಯಾಗುತ್ತಿತ್ತು. ಕೆಲವು ಮಹಿಳಾ ಕಾರ್ಪೊರೇಟರ್ ಗಳ ಮೊಬೈಲ್ ಗಳನ್ನು ಅವರ ಗಂಡಂದಿರು ತಮ್ಮ ಖಾಸಗಿ ಬಳಕೆಗೆ ಉಪಯೋಗಿಸುತ್ತಿದ್ದರು. ಕನಿಷ್ಠವೆಂದರೂ ಕಾರ್ಪೊರೇಟರ್ ಗಳ ಮೊಬೈಲ್ ಬಿಲ್ 3,000 ದಾಟುತ್ತಿದ್ದವು.
ಮೈಸೂರು ನಗರ ಆಯುಕ್ತ ಪಿ.ಮಣಿವಣ್ಣನ್ ಅವರು 10 ವರ್ಷಗಳ ಹಿಂದೆ ಅಧಿಕಾರದಲ್ಲಿದ್ದಾಗ 67 ಕಾರ್ಪೊರೇಟರ್ ಗಳಿಗೆ ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಉಚಿತ ಮೊಬೈಲ್ ಗಳನ್ನು ನೀಡಲಾಗಿತ್ತು. ಕಾರ್ಪೊರೇಟರ್, ಅಧಿಕಾರಿಗಳು ಮತ್ತು ನಾಗರಿಕರ ಮಧ್ಯೆ ಸುಲಭವಾಗಿ ಸಂವಹನ ನಡೆಯಲು ಈ ಮೊಬೈಲ್ ಸೌಲಭ್ಯವನ್ನು ನೀಡಲಾಗಿತ್ತು. ಕಾರ್ಪೊರೇಟರ್ ಗಳ ಕೊನೆಯ ಎರಡು ಸಂಖ್ಯೆಗಳು ಅವರ ವಾರ್ಡು ಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದವು.
ಆದರೆ ಕರ್ಪೊರೇಟರ್ ಗಳು ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಮುನಿಸಿಪಲ್ ಆಡಳಿತ ನಿರ್ದೇಶನಾಲಯ ಸಂಪರ್ಕ ತೆಗೆದುಹಾಕಿದೆ.
ಪೋಸ್ಟ್ ಪೇಯ್ಡ್ ಸಂಪರ್ಕವನ್ನು ತೆಗೆದುಹಾಕುವಂತೆ ನಿರ್ದೇಶನಾಲಯ ಆದೇಶ ಹೊರಡಿಸಿದೆ ಎಂದು ಎಂಸಿಸಿ ಆಯುಕ್ತ ಜಿ. ಜಗದೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics