ಮೈಸೂರು: ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ ಕಳೆದ ಬುಧವಾರ ನಡೆದ ಭಯೋತ್ಪಾದಕರ ಜೊತೆಗಿನ ಹೋರಾಟದಲ್ಲಿ ಮೈಸೂರಿನ ಭದ್ರೆಗೌಡನ ಕೊಪ್ಪಲು ಗ್ರಾಮದ ಯೋಧ ಗಾಯ ಗೊಂಡಿದ್ದಾರೆ.
ಯೆಲವಾಲ ಹೋಬಳಿಯ ಭದ್ರೇಗೌಡನ ಕೊಪ್ಪಲು ನಿವಾಸಿ ಬಸವರಾಜೇಗೌಡ ಎಂಬುವರ ಪುತ್ರ ಬಿ. ರಮೇಶ(26) ಗಾಯಗೊಂಡಿದ್ದಾರೆ, ಜಮ್ಮು ಕಾಶ್ಮೀರದ ಪಂಚಗಾಹು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನೆಸಿದ ಪರಿಣಾಮ ರಮೇಶ್ ಗೆ ಮೂರು ಬುಲೆಟ್ ಗಳು ಹೊಕ್ಕಿವೆ. ಇಬ್ಬರು ಯೋಧರು ಮೃತ ಪಟ್ಟಿದ್ದಾರೆ.
ರಮೇಶ್ ಅವರನ್ನು 92 ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ಸಂಬಂಧ ಏಪ್ರಿಲ್ 26 ರಂದು ರಮೇಶ್ ಕುಟುಂಬಕ್ಕೆ ವಿಷಯ ತಿಳಿಸಲಾಗಿತ್ತು. ರಮೇಶ್ ಅವರ ದೇಹಕ್ಕೆ ಹೊಕ್ಕಿದ್ದ 3 ಗುಂಡುಗಳನ್ನು ಹೊರತೆಗೆಯಲಾಗಿದೆ.
ಗಾಯಗೊಂಡಿರುವ ರಮೇಶ್ ಅವರನ್ನು ನೋಡಲು ಅವಕಾಶ ಕಲ್ಪಿಸಿ ಎಂದು ರಮೇಶ್ ಪತ್ನಿ ತಾಯಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಯೋಧ ರಮೇಶ್ ಅವರ ಆರೋಗ್ಯ ಸ್ಥಿತಿ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ಖುದ್ದಾಗಿ ಅವರನ್ನು ನೋಡಬೇಕಿದೆ. ಇದರಿಂದ, ನಮ್ಮ ಕುಟುಂಬದ ಒಬ್ಬರನ್ನು ಅಲ್ಲಿಗೆ ಕಳುಹಿಸಲು ಅವಕಾಶ ಕಲ್ಪಿಸಿ ಎಂದು ಅವರು ಮೈಸೂರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics