ಬೆಂಗಳೂರು: ಹಾಡಹಗಲೇ ಮೂರು ವರ್ಷದ ಬಾಲಕಿಯನ್ನು ಚಿಂದಿ ಆಯುವವ ಮೊನ್ನೆ ಶನಿವಾರ ಅಪಹರಣ ಮಾಡಿದ ಘಟನೆ ಸಿದ್ದಾಪುರ ಕೊಳಗೇರಿ ಪ್ರದೇಶದಲ್ಲಿ ನಡೆದಿದೆ. ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಸಯ್ಯದ್ ಇಮಾಮುದ್ದೀನ್ ಮತ್ತು ಶಬನಮ್ ಅವರ ಮಗಳಾಗಿದ್ದಾಳೆ. ದಿನಗೂಲಿ ನೌಕರರಾಗಿರುವ ಸಯ್ಯದ್ ದಂಪತಿ ಸಿದ್ದಾಪುರದ ಗುಟ್ಟೇಪಾಳ್ಯದಲ್ಲಿ ವಾಸವಾಗಿದ್ದಾರೆ.
ತನ್ನ ಸಂಬಂಧಿಕ ಬಾಲಕನೊಂದಿಗೆ ಮಧ್ಯಾಹ್ನದ ಹೊತ್ತು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತುವಿನ ಚಟ ಹೊಂದಿದ್ದ ಬಾಲಕ ಆಕೆಯನ್ನು ಬಲವಂತವಾಗಿ ಆಟಕ್ಕೆ ಕರೆದಿದ್ದ. ಬಾಲಕಿಯ ಅಪಹರಣವಾದ ಕೂಡಲೇ ಬುರಾನ್ ಶಬನಮ್ ಗೆ ತಿಳಿಸಿದ್ದ. ಆಕೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸು ದಾಖಲಿಸಿದ್ದಾರೆ.
ಹತ್ತಿರದ ಪ್ಲಾಸ್ಟಿಕ್ ಗೋಡೌನ್ ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ದಾಖಲಾಗಿದೆ.
ಆರೋಪಿ ಪತ್ತೆಗಾಗಿ ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics