'ಕನ್ಯಾ ಭಾಗ್ಯ'ಕ್ಕಾಗಿ ರಾಜ್ಯ ಸರ್ಕಾರದ ಮೊರೆ ಹೋದ ಗದಗ ರೈತ (ಸಾಂಕೇತಿಕ ಚಿತ್ರ) 
ರಾಜ್ಯ

'ಕನ್ಯಾ ಭಾಗ್ಯ'ಕ್ಕಾಗಿ ರಾಜ್ಯ ಸರ್ಕಾರದ ಮೊರೆ ಹೋದ ಗದಗ ರೈತ

ಹಲವು ಭಾಗ್ಯ ಸರಣಿಯ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರಕ್ಕೆ ತನಗೆ 'ಕನ್ಯಾ ಭಾಗ್ಯ'ವನ್ನು ಕರುಣಿಸಬೇಕಾಗಿ ಗದಗದ ರೈತರೊಬ್ಬರು ಮನವಿ ಮಾಡಿದ್ದಾರೆ.

ಗದಗ: ಹಲವು ಭಾಗ್ಯ ಸರಣಿಯ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರಕ್ಕೆ ತನಗೆ ’ಕನ್ಯಾ ಭಾಗ್ಯ’ವನ್ನು ಕರುಣಿಸಬೇಕಾಗಿ ಗದಗದ ರೈತರೊಬ್ಬರು ಮನವಿ ಮಾಡಿದ್ದಾರೆ. ಗದಗ ಜಿಲ್ಲೆಯ ರಾಮಗಿರಿಯ ರೈತ ಮಂಜುನಾಥ್ ಪೂಜಾರ (29) ಕಳೆದ 3 ವರ್ಷಗಳಿಂದ ವಧು ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಆದರೆ ಕೃಷಿಕರೆಂಬ ಕಾರಣಕ್ಕೆ ಮಾದುವೆ ಮಾಡಿಕೊಡಲು ಹಣ್ಣುಮಕ್ಕಳ ಪೋಷಕರು ಒಪ್ಪುತ್ತಿಲ್ಲ. 
ಮಂಜುನಾಥ್ ಪೂಜಾರ 5 ಎಕರೆಯಷ್ಟು ಜಮೀನು ಹೊಂದಿದ್ದು, ಯಾರೂ ತಮಗೆ ಹೆಣ್ಣು ಕೊಡುವುದಕ್ಕೆ ಮುಂದಾಗದೇ ಇರುವುದರಿಂದ ಬೆಸತ್ತು ಕನ್ಯಾ ಭಾಗ್ಯ ಕರುಣಿಸುವಂತೆ ರಾಜ್ಯ ಸರ್ಕಾರದ ಮೊರೆ ಹೋಗಿದ್ದಾರೆ. ಗ್ರಾಮಪಂಚಾಯಿತಿಯಲ್ಲಿ ಈ ಸಂಬಂಧ ಮನವಿ ಪತ್ರವನ್ನೂ ನೀಡಿರುವ ಮಂಜುನಾಥ್ ಪೂಜಾರ, ತನ್ನಂತಹ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಕೇವಲ ಇಂಜಿನಿಯರ್ ಗಳಿಗೆ ಮಾತ್ರ ಯುವತಿಯರು, ಯುವತಿಯರ ಪೋಷಕರು ಆದ್ಯತೆ ನೀಡುತ್ತಿದ್ದಾರೆ. ಹೀಗಾದರೆ ನನ್ನಂಥವರ ಕಥೆಯೇನು ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ. 
ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಘೋಷಿಸಿರುವಂತೆ ತನಗೆ ಕನ್ಯಾ ಭಾಗ್ಯವನ್ನು ನೀಡಬೇಕು, ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಶೀಘ್ರವೇ ಪ್ರಾರಂಭಿಸಲಿದೆ ಎಂಬ ವಿಶ್ವಾಸವಿದೆ ಎಂದು ಮಂಜುನಾಥ್ ಪೂಜಾರ ಹೇಳಿದ್ದಾರೆ. ಪೂಜಾರ ಎದುರಿಸುತ್ತಿರುವ ಪರಿಸ್ಥಿತಿಗೆ ಗ್ರಾಮದ ಮಂದಿ ಸಹ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. 
ಮನವಿ ಪತ್ರ ಸ್ವೀಕರಿಸಿದ ಮೊದಲು ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಮಂಜುನಾಥ್ ಪೂಜಾರ ಮನವಿ ಪತ್ರವನ್ನು ಹಾಸ್ಯ ಮಾಡಿದ್ದರು. ಆದರೆ ಸತತ 15 ಬಾರಿ ಇಂಥಹದ್ದೇ ಮನವಿ ಪತ್ರ ನೀಡಿದ್ದು, 15 ನೇ ಬಾರಿ ಸ್ವೀಕರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!