ಕಂದಕಕ್ಕೆ ಯುವಕರು ಹಾರುವುದಕ್ಕೆ ಮುನ್ನ
ಬೆಳಗಾವಿ: ಕುಡಿದ ಮತ್ತಿನಲ್ಲಿ ಆಯತಪ್ಪಿ ನೂರು ಅಡಿ ಆಳದ ಕಂದಕಕ್ಕೆ ಇಬ್ಬರು ಯುವಕರು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಂಬೋಲಿಯಲ್ಲಿ ಕಳೆದ ಸೋಮವಾರ ನಡೆದಿದೆ.
ಮೃತ ಯುವಕರನ್ನು ಇಮ್ರಾನ್ ಗರ್ಡಿ ಮತ್ತು ಪ್ರಸಾದ್ ರಾಥೋಡ್ ಎಂದು ಗುರುತಿಸಲಾಗಿದ್ದು ಇವರು ಮಹಾರಾಷ್ಟ್ರದ ಗಾಡಿಂಗ್ಲಾಜ್ ನವರಾಗಿದ್ದಾರೆ. ಇವರು ಗಾಡಿಂಗ್ಲಜ್ ನಲ್ಲಿ ಕೋಳಿ ಫಾರ್ಮ್ ನಲ್ಲಿ ನೌಕರರಾಗಿದ್ದು ತಮ್ಮ ಸಹೋದ್ಯೋಗಿಗಳ ಜೊತೆ ಪ್ರೇಕ್ಷಣೀಯ ಸ್ಥಳ ಅಂಬೋಲಿಗೆ ಹೋಗಿದ್ದರು.
ಅಲ್ಲಿ ಮೋಜು ಮಾಡುತ್ತಾ ಮದ್ಯಪಾನ ಮಾಡಿ ಸೇತುವೆಯ ಅಪಾಯ ವಲಯವನ್ನು ಪ್ರೇವೇಶಿಸಿದರು. ಅವರ ಜೊತೆ ಹೋದವರನ್ನು ಬಿಟ್ಟು ಹೋಗಿದ್ದಾರೆ. ಅವರ ಸಹೊದ್ಯೋಗಿಗಳಿಗೆ ಗರ್ಡಿ ಮತ್ತು ಪ್ರಸಾದ್ ಎಲ್ಲಿ ಹೋಗಿದ್ದಾರೆ ಎಂದು ಗೊತ್ತಿರಲಿಲ್ಲ. ಯುವಕರು ಕಾಣೆಯಾಗಿದ್ದಾರೆ ಎಂದು ಕೋಳಿ ಫಾರ್ಮ್ ನ ಮಾಲಿಕ ದಯಾನಂದ ಪಾಟೀಲ್ ಅಂಬೊಲಿ ಪೊಲೀಸರಿಗೆ ದೂರು ನೀಡಿದ್ದರು.
ಇಬ್ಬರು ಯುವಕರು ಕಂದಕಕ್ಕೆ ಬೀಳುವುದನ್ನು ಬೇರೆ ಪ್ರವಾಸಿಗರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಅಪಾಯದ ವಲಯ ಪ್ರವೇಶಿಸಿರುವುದನ್ನು ಕೆಲವರು ನೋಡಿದ್ದರು. ಅವರಿಗೆ ಎಚ್ಚರಿಕೆ ನೀಡಿದರೂ ಕೂಡ ಆ ಯುವಕರು ಯಾರ ಮಾತನ್ನೂ ಕೇಳಲಿಲ್ಲ. ಅವರು ಕುಡಿದ ಅಮಲಿನಲ್ಲಿದ್ದರು. ಗರ್ಡಿಯ ಕೈ ಹಿಡಿಯಲು ಹೋದ ರಾಥೋಡ್ ಕೂಡ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ.
ಬೆಳಗಾವಿಯ ಯುವಕರು ಇದರ ವಿಡಿಯೋ ಮಾಡಿದ್ದು ಅವರು ಘಟನೆಗೆ ಸಾಕ್ಷಿಯಾಗಿದ್ದಾರೆ.ನಂತರ ಮೃತ ಯುವಕರ ದೇಹ ಪೊಲೀಸರಿಗೆ ಸಿಕ್ಕಿದೆ.