ಸಂಗ್ರಹ ಚಿತ್ರ 
ರಾಜ್ಯ

ಗುಜರಾತ್ "ಕೈ" ಶಾಸಕರಿಂದ ರಾಜ್ಯಪಾಲರ ಭೇಟಿ; 15 ಕೋಟಿಗೆ ಶಾಸಕರ ಖರೀದಿಗೆ ಯತ್ನಿಸಿದ್ದ ಬಿಜೆಪಿ!

ಒಂದೆಡೆ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ ಬೆನ್ನಲ್ಲೇ ಅತ್ತ ಈಗಲ್ ಟನ್ ರೆಸಾರ್ಟ್ ನಲ್ಲಿ ಅತಂತ್ರರಾಗಿದ್ದ ಗುಜರಾತ್ ಕಾಂಗ್ರೆಸ್ ಶಾಸಕರು ನಗರ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರು: ಒಂದೆಡೆ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ ಬೆನ್ನಲ್ಲೇ ಅತ್ತ ಈಗಲ್ ಟನ್ ರೆಸಾರ್ಟ್ ನಲ್ಲಿ ಅತಂತ್ರರಾಗಿದ್ದ ಗುಜರಾತ್ ಕಾಂಗ್ರೆಸ್  ಶಾಸಕರು ನಗರ ಪ್ರವಾಸ ಕೈಗೊಂಡಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಗಿಬಿದ್ದ ಬೆನ್ನಲ್ಲೇ ಗುಜರಾತ್ ಕೈ ಶಾಸಕರ ಪ್ಪವಾಸ  ಮೊಟಕುಗೊಂಡಿತ್ತು. ಆದರೆ ಇತ್ತೀಚೆಗೆ ಕೆಲ ಶಾಸಕರು ತಮ್ಮ ತಮ್ಮ ಸ್ವಕ್ಷೇತ್ರಗಳಿಗೆ ವಾಪಸ್ ಆಗವು ಬೆದರಿಕೆ ಹಾಕಿರುವ ಬೆನ್ನಲ್ಲೇ ಕಂಗಾಲಾದ ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಂತೆ  ರಾಜ್ಯ ನಾಯಕರಿಗೆ ಸೂಚಿಸಿತ್ತು.

ಅದರಂತೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಹಾಗೂ ದಿನೇಶ್ ಗುಂಡೂರಾವ್ ಅವರು ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಹೈಕಮಾಂಡ್ ಆಣತಿಯಂತೆ ಶಾಸಕರನ್ನು ಬೆಂಗಳೂರಿನ ಪ್ರೇಕ್ಷಣೀಯ ಪ್ರದೇಶಗಳಿಗೆ  ಪ್ರವಾಸಕ್ಕೆ ಕಳುಹಿಸಲಾಗಿದೆ. ಒಟ್ಟು ಎರಡು ಐರಾವತ ಬಸ್ ಗಳಲ್ಲಿ ಗುಜರಾತ್ ನ 44 ಕಾಂಗ್ರೆಸ್ ಶಾಸಕರನ್ನು ನಗರ ಪ್ರವಾಸಕ್ಕೆ ಕಳುಹಿಸಲಾಗಿದೆ. ಅದರಂತೆ ಬೆಂಗಳೂರಿನ ವಿಧಾನಸೌಧ, ರಾಜಭವನ, ಹೈಕೋರ್ಟ್ ಸೇರಿದಂತೆ  ಹಲವು ಪ್ರೇಕ್ಷಣೀಯ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ.

ರಾಜ್ಯಪಾಲರ ಭೇಟಿ ಮಾಡಿದ ಶಾಸಕರು
ಇದೇ ವೇಳೆ ನಗರ ಪ್ರವಾಸ ಕೈಗೊಂಡಿರುವ ಗುಜರಾತ್ ಶಾಸಕರು ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿದರು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ವಾಲಾ ಅವರನ್ನು  ಶಾಸಕರು ಭೇಟಿ ಮಾಡಿ ಚರ್ಚಿಸಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಕೂಡ ಗುಜರಾತ್ ಮೂಲದ ರಾಜಕಾರಣಿಯಾಗಿದ್ದು, ಸುಮಾರು 35 ವರ್ಷಗಳ ಕಾಲ ರಾಜಕೀಯದಲ್ಲಿದ್ದರು. ಹೀಗಾಗಿ ಇಂದಿನ ಕೈ ಶಾಸಕರ ಭೇಟಿ  ತೀವ್ರ ಕುತೂಹಲ ಕೆರಳಿಸಿದೆ.

15 ಕೋಟಿಗೆ ಶಾಸಕರ ಖರೀದಿಗೆ ಯತ್ನಿಸಿದ್ದ ಬಿಜೆಪಿ
ಇದೇ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಅವರ ಭೇಟಿ ಬಳಿಕ ಹೊರಗೆ ನೆರೆದಿದ್ದ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು,  15 ಕೋಟಿ ನೀಡಿ ಬಿಜೆಪಿ ನಮ್ಮನ್ನು ಖರೀದಿಸಲು ಯತ್ನಿಸಿತು. ಹೀಗಾಗಿ ನಾವು ಪ್ರಜಾಪ್ರಭುತ್ವ ಉಳಿವಿಗಾಗಿ ಕರ್ನಾಟಕಕ್ಕೆ ಬಂದೆವು. ನಮ್ಮನ್ನು ಯಾರೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ಮೋದಿ ಸರ್ಕಾರ ಆದಾಯ ತೆರಿಗೆ  ಇಲಾಖೆಯನ್ನು ಮುಂದಿಟ್ಟುಕೊಂಡು ನಮ್ಮನ್ನು ಹಣಿಯುವ ಯತ್ನ ಮಾಡುತ್ತಿದೆ. ಆದರೆ ಈ ಬೆದರಿಕೆ ತಂತ್ರಕ್ಕೆ ನಾವು ಬಗ್ಗುವುದಿಲ್ಲ. ಇವರಿಗೆ ನಿಜಕ್ಕೂ ತೆರಿಗೆ ದಾಳಿ ಮಾಡಬೇಕು ಎದಿದ್ದರೆ, ಮೂರು ದಿನ ಮುಂಚಿತವಾಗಿ ಅಧವಾ  ಮೂರು ದಿನಗಳ ಬಳಿಕ ಮಾಡಿಸಬಹುದಿತ್ತು. ಆದರೆ ನಮ್ಮನ್ನು ಬೆದರಿಸುವ ಸಲುವಾಗಿ ಈಗ ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!