ಬೆಂಗಳೂರು: ಬೆಂಗಳೂರಿನ ಜನತೆಗೆ ಟ್ರಾಫಿಕ್ ಕಿರಿಕಿಯಿಂದ ಮುಕ್ತಿ ಕೊಡಲು ರೂಪಿಸಲಾಗಿರುವ ಲಘು ರೈಲು ಸಾರಿಗೆ ವ್ಯವಸ್ಥೆ ಯೋಜನೆಯನ್ನು ಬೆಂಗಳೂರು ಮೆಟ್ರೋ ನಿಗಮಕ್ಕೆ ನೀಡಲಾಗಿದೆ.
ಲಘು ರೈಲು ಸಾರಿಗೆ ವ್ಯವಸ್ಥೆ (ಎಲ್ಆರ್ ಟಿಎಸ್) ಯೋಜನೆಯನ್ನು ಮೂಲಸೌಕರ್ಯ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಯೋಜನೆಯನ್ನು ಮೆಟ್ರೋ ನಿಗಮಕ್ಕೆ ನೀಡಲಾಗಿದೆ.
ಈ ಯೋಜನೆಗೆ ಬೆಂಗಳೂರು ಏರ್ ಪೋರ್ಟ್ ರೈಲ್ ಲಿಂಕ್ (ಬಿಎಆರ್ ಎಲ್) ನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿದ್ದು, ಪ್ರಸ್ತಾವಿತ 42 ಕಿಮೀ ಎಲಿವೇಟೆಡ್ ಯೋಜನೆಯನ್ನು 2 ಕಿಮೀ ವರೆಗೆ ವಿಸ್ತರಿಸಲಾಗಿದ್ದು 10,000 ಕೋಟಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
ಮೆಟ್ರೋ ಫೆಸ್-2ಎ ನಲ್ಲಿ ಕೆಆರ್ ಪುರಂ, ಸಿಲ್ಕ್ ಬೋರ್ಡ್ ಸೇರಿದಂತೆ ಹೊರ ವರ್ತುಲ ರಸ್ತೆಯ ಪೂರ್ವ ಭಾಗವನ್ನು ಮೆಟ್ರೋ ಪೂರ್ಣಗೊಳಿಸಲಿದೆ, ಆದ್ದರಿಂದ ಹೊರ ವರ್ತುಲದ ಪಶ್ಚಿಮ ಭಾಗದಲ್ಲಿ ನಿರ್ಮಾಣವಾಗಬೇಕಿರುವ ಎಲ್ ಆರ್ ಟಿಯನ್ನೂ ಸಹ ಮೆಟ್ರೋ ನಿಗಮಕ್ಕೇ ವಹಿಸಲಾಗಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.