ರಾಜ್ಯ

ಬೆಂಗಳೂರು: ಕಾಮುಕರು ಅಪಹರಿಸಿದ್ದ ಯುವತಿ ರಕ್ಷಣೆಗೆ ಸಹಾಯ ಮಾಡಿದ ಆಟೋ ಚಾಲಕ

Lingaraj Badiger
ಬೆಂಗಳೂರು: ಕಾಮುಕರು ಯಶವಂತಪುರ ರೈಲ್ವೆ ನಿಲ್ದಾಣದ ಸಮೀಪ ಬೆಳಗಿನ ಜಾವ ಯುವತಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಲು ಯತ್ನಿಸಿದ್ದು, ಇದನ್ನು ಗಮನಿಸಿದ ಆಟೋ ಚಾಲಕರೊಬ್ಬರು ಪೊಲೀಸರಿಗೆ ಸಹಾಯ ಮಾಡಿ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ನಿನ್ನೆ ಮಧ್ಯರಾತ್ರಿ ಒಬ್ಬ ವ್ಯಕ್ತಿ ಮತ್ತು ಯುವತಿ ಯಶವಂತಪುರ ರೈಲ್ವೆ ನಿಲ್ಮಾಣದ ಸಮೀಪ ಚಿತ್ರದುರ್ಗಕ್ಕೆ ತೆರಳಲು ರೈಲುಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮೂವರು ಕಾಮುಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವತಿಯನ್ನು ಸಮೀಪದ ಸೆಡ್ ವೊಂದಕ್ಕೆ ಎಳೆದೊಯ್ದಿದ್ದಾರೆ.
ಇದೇ ವೇಳೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಅಝ್ಗರ್ ಪಾಷಾ ಎಂಬ ಆಟೋ ಚಾಲಕ ರಸ್ತೆಯಲ್ಲಿ ಬಿದ್ದಿದ್ದ ಯುವತಿಯೊಂದಿಗಿದ್ದ ವ್ಯಕ್ತಿಯನ್ನು ಯಶವಂತಪುರ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಅಝ್ಗರ್ ಪಾಷಾ ಮತ್ತು ಪೊಲೀಸರು ಆ ಸೆಡ್ ಗೆ ಹೋಗಿ ಯುವತಿಯನ್ನು ರಕ್ಷಿಸಿದ್ದಾರೆ. 
ಯುವತಿಯನ್ನು ಅಪಹರಿಸಿದ ಫಯಾಜ್ ನನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದಿದ್ದು, ಇತರೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದರು. ಆದರೆ ಆ ಪೈಕ್ ಜುಬೇರ್ ಎಂಬ ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿದ್ದು. ಮತ್ತೊಬ್ಬನಿಗಾಗಿ ಶೋಧ ನಡೆಸುತ್ತಿದ್ದಾರೆ.
ಫಯಾಜ್ ಮತ್ತು ಜುಬೇರ್ ಇಬ್ಬರು ಯಶವಂತಪುರ ರೈಲ್ವೆ ನಿಲ್ದಾಣದ ಸಮೀಪ ಪಾರ್ಟ್ ಟೈಮ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮೂರನೇ ಆರೋಪಿಯ ಬಗ್ಗೆಯೂ ನಮಗೆ ಮಾಹಿತಿ ಇದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿರುವ ಆಟೋ ಚಾಲಕ ಅಝ್ಗರ್ ಪಾಷಾ ಅವರು, ನಿನ್ನೆ ರಾತ್ರಿ 12.15ರಿಂದ 12.30ರ ಮಧ್ಯ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿ ನಾನು ಆಟೋ ನಿಲ್ಲಿಸಿ ವಿಚಾರಿಸಿದೆ. ಹಾಗ ಆ ವ್ಯಕ್ತಿ ತನ್ನ ಸಂಬಂಧಿ ಯುವತಿಯನ್ನು ಅಪಹರಿಸಿರುವ ಬಗ್ಗೆ ಹೇಳುತ್ತಾರೆ. ಕೂಡಲೇ ನಾನು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದೆ. ಅಲ್ಲದೆ ಈ ಕುರಿತು ನನ್ನ ಸಹ ಆಟೋ ಚಾಲಕರೊಂದಿಗೆ ವಿಚಾರಿಸಿದಾಗ ಆರೋಪಿ ಫಯಾಜ್ ಬಗ್ಗೆ ಮತ್ತು ಯುವತಿಯನ್ನು ಸೆಡ್ ಗೆ ಕರೆದೊಯ್ದಿರುವ ಬಗ್ಗೆ ಮಾಹಿತಿ ಸಿಕ್ಕಿತು ಎಂದು ಹೇಳಿದ್ದಾರೆ. 
SCROLL FOR NEXT