ರಾಜ್ಯ

ಶಾಲಾ ಆವರಣಕ್ಕೆ ಅತಿಕ್ರಮ ಪ್ರವೇಶ: ಎಬಿವಿಪಿ ವಿರುದ್ಧ ಕಾನೂನು ಕ್ರಮಕ್ಕೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಚಿಂತನೆ

Srinivas Rao BV
ಬೆಂಗಳೂರು: ಚೀನಾ ಹೊಸ ವರ್ಷಾಚರಣೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಎಬಿವಿಪಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಡೆಲ್ಲಿ ಪಬ್ಲಿಕ್ ಸ್ಕೂಲ್ ಚಿಂತನೆ ನಡೆಸಿದೆ. ಅತಿಕ್ರಮ ಪ್ರವೇಶದ ಆರೋಪದಡಿ ಕಾನೂನು ಕ್ರಮ ಜರುಗಿಸಲು ಡೆಲ್ಲಿ ಪಬ್ಲಿಕ್ ಸ್ಕೂಲ್ ಯೋಚಿಸಿದೆ.
ಎಬಿವಿಪಿ ಕಾರ್ಯಕರ್ತರು ಶಾಲೆಯೊಳಗೆ ಪ್ರವೇಶಿಸಿದಾಗ ಸಾವಿರಾರು ಮಕ್ಕಳು ಹಾಗೂ ಬೋಧಕ ಸಿಬ್ಬಂದಿಗಳು ತರಗತಿಯಲ್ಲಿದ್ದರು, ಪರಿಚಯವಿಲ್ಲದ ವ್ಯಕ್ತಿಗಳು ಪ್ರವೇಶಿಸಿದ್ದರಿಂದ ಶೈಕ್ಷಣಿಕ ಚಟುವಟಿಕೆಗೆ ಅಡಚಣೆಯುಂಟಾಗಿದೆ. ಅತಿಕ್ರಮ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಎಬಿವಿಪಿ ವಿರುದ್ಧ ಡೆಲ್ಲಿ ಪಬ್ಲಿಕ್ ಸ್ಕೂಲ್ ಕಾನೂನು ಕ್ರಮದ ಮೊರೆ ಹೋಗಲು ಚಿಂತನೆ ನಡೆಸಿದೆ ಎಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಆಡಳಿತ ಮಂಡಳಿಯ ಸದಸ್ಯ ಮನ್ಸೂಲ್ ಅಲಿ ಖಾನ್ ಹೇಳಿದ್ದಾರೆ. 
ಡೋಕ್ಲಾಮ್ ನಲ್ಲಿ ಚೀನಾ ಕ್ಯಾತೆ ತೆಗೆದಿದ್ದು ಬಿಕ್ಕಟ್ಟು ಉಂಟಾಗಿರುವ ಸಂದರ್ಭದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಚೀನಾದಲ್ಲಿನ ಹೊಸ ವರ್ಷಾಚರಣೆಯನ್ನು ಶಾಲೆಯಲ್ಲಿ ಆಚರಿಸಲು ಮುಂದಾಗಿತ್ತು, ಇದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
SCROLL FOR NEXT