ರಾಜ್ಯ

ಪಂಚಾಂಗದಲ್ಲಿ ಗೊಂದಲ: ಉಡುಪಿಯಲ್ಲಿ ಇಂದು ಕೃಷ್ಣ ಜನ್ಮಾಷ್ಠಮಿ ಆಚರಣೆ ಇಲ್ಲ

Shilpa D
ಮಂಗಳೂರು: ಇಡೀ ಭಾರತಾದ್ಯಂತ ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಆದರೆ 13 ನೇ ಶತಮಾನದ ದೇವಾಲಯಗಳ ನಗರಿ ಎಂದೇ ಪ್ರಸಿದ್ದವಾಗಿರುವ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಇಂದು ಆಚರಿಸಲಾಗುತ್ತಿಲ್ಲ. ಉಡುಪಿಯ ಅಷ್ಟಮಠಗಳಲ್ಲೂ ಇಂದು ಜನ್ಮಾಷ್ಠಮಿ ಸಂಭ್ರಮವಿಲ್ಲ.
ಸೆಪ್ಟೆಂಬರ್ 13 ಮತ್ತು 14ಕ್ಕೆ ಅಷ್ಟಮಿಯನ್ನು  ಉಡುಪಿಯಲ್ಲಿ ಅಚರಿಸಲಾಗುತ್ತದೆ. ಉಳಿದಂತೆ ದೇಶಾದ್ಯಂತ ಇಂದು ಮತ್ತು ನಾಳೆ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಪಂಚಾಗದ ಪ್ರಕಾರ ಕೃಷ್ಣ ಜನ್ಮಾಷ್ಟಮಿ ಆಗಬೇಕಾದ್ರೆ ಸಿಂಹ ಮಾಸದ-ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯಂದು ಚಂದ್ರೋದಯವಾಗುವ ಕಾಲ ಬರಬೇಕು. ಆ ಗಳಿಗೆಯಲ್ಲಿ ಶ್ರೀ ಕೃಷ್ಣ ಜನಿಸಿದ್ದು, ಹೀಗಾಗಿ ಈ ಘಳಿಗೆ ಮುಂದಿನ ತಿಂಗಳು ಅಂದರೆ ಸೆಪ್ಟಂಬರ್ ನಲ್ಲಿ ಇರುವುದರಿಂದ ಉಡುಪಿಯಲ್ಲಿ ಸೆಪ್ಟಂಬರ್ 13 ಮತ್ತು 14 ರಂದು  ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ ಎಂದು ಹಿರಿಯ ಪಂಡಿತ ಪ್ರೊ. ಗೋಪಾಲಾಚಾರ್ಯ ಹೇಳಿದ್ದಾರೆ.
ಇನ್ನು ಕೆಲವೆಡೆ ಚಾಂದ್ರಮಾನ ಪಂಚಾಂಗದ ಪ್ರಕಾರ ಉಳಿದ ಸ್ಥಳಗಳಲ್ಲಿ ಕೃಷ್ಣ ಜನ್ಮಾಷ್ಠಾಮಿ ಆಚರಣೆ ನಡೆಯುತ್ತದೆ. 
SCROLL FOR NEXT