ಯುವತಿಯನ್ನು ಸನ್ಮಾನಿಸಿದ ಪಿಯೂಶ್ ಗೋಯಲ್ 
ರಾಜ್ಯ

ಮೈಸೂರು: ಮೊದಲ ಸಂಬಳದಲ್ಲಿ ಶಾಲೆಯಲ್ಲಿ ಶೌಚಾಲಯ ಕಟ್ಟಿಸಿದ ಯುವತಿಗೆ ಕೇಂದ್ರ ಸಚಿವರಿಂದ ಸನ್ಮಾನ

ತನ್ನ ಮೊದಲ ತಿಂಗಳ ಆದಾಯದಲ್ಲಿ ಖಾಸಗಿ ಶಾಲೆಯಲ್ಲಿ ಬಾಲಕಿಯರಿಗಾಗಿ ಎರಡು ಶೌಚಾಲಯ ನಿರ್ಮಿಸಿದ ಯುವತಿಯನ್ನು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು ಅಭಿನಂದಿಸಿದ್ದಾರೆ...

ಮೈಸೂರು: ಯುವಜನತೆ ಕೆಲಸಕ್ಕೆ ಸೇರಿ, ತನ್ನ ಮೊದಲ ತಿಂಗಳ ಸಂಬಳದಲ್ಲಿ ತನ್ನ ತಂದೆ-ತಾಯಿಗಳಿಗೆ ಉಡುಗೊರೆ ಕೊಡಿಸುವುದು ಇಲ್ಲವೇ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದು ಸಾಮಾನ್ಯ. ಆದರೆ ಮೈಸೂರಿನ ಈ ಯುವತಿ ತನ್ನ ಮೊದಲ ತಿಂಗಳ ಸಂಬಳದಲ್ಲಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿ ಯುವಜನತೆಗೆ ಸ್ಫೂರ್ತಿಯಾಗಿದ್ದಾಳೆ. 
21 ವರ್ಷದ ಇಟ್ಟಿಗೆಗೂಡು ನಿವಾಸಿ ಮೇಘಾ ಕೊಚಾರ್ ಅವರು ತನ್ನ ಮೊದಲ ತಿಂಗಳ ಸಂಬಳ 20,600 ರುಪಾಯಿಯಲ್ಲಿ ಮಾಕನಹುಂಡಿ ಗ್ರಾಮದಲ್ಲಿನ ಎಸಿ ಕಾನ್ವೆಂಟ್ ಶಾಲೆಯಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿರುವುದ್ದು ಮೈಸೂರಿಗೆ ಭೇಟಿ ನೀಡಿದ ಇಂಧನ ಸಚಿವ ಪಿಯೂಶ್ ಗೋಯಲ್ ಅವರು ಯುವತಿಯ ಕಾರ್ಯವನ್ನು ಶ್ಲಾಘಿಸಿದರು. 
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಿಂದ ಸ್ಫೂರ್ತಿ ಪಡೆದ ಮೇಘಾ ಕೊಚರ್ ಅವರು ತಾನು ಆರನೇ ತರಗತಿ ಓದುತ್ತಿದ್ದಾಗ ಶೌಚಾಲಯ ಸಮಸ್ಯೆಯಿಂದ ತೊರೆದಿದ್ದ ಶಾಲೆಯಲ್ಲೇ ಎರಡು ಶೌಚಾಲಯವನ್ನು ಕಟ್ಟಿಸಿದ್ದಾರೆ. ಶಾಲೆಯಲ್ಲಿ 90 ಮಕ್ಕಳು ಓದುತ್ತಿದ್ದು ಅದರಲ್ಲಿ 50 ಮಂದಿ ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 
ಖುದ್ದು ಕೇಂದ್ರ ಸಚಿವರೇ ನನ್ನ ಕೆಲಸವನ್ನು ಕಾಣಲು ಬರುತ್ತಿದ್ದಾರೆ ಎಂದು ಬಿಜೆಪಿಯಿಂದ ಪತ್ರ ಬಂದಿತ್ತು. ಮೊದಲಿಗೆ ನನಗೆ ಇದನ್ನು ನಂಬಲು ಸಾಧ್ಯವಾಗಿರಲಿಲ್ಲ. ನಂತರ ಬಿಜೆಪಿಯು ಶಾಲೆಯಲ್ಲೇ ಪುಟ್ಟದೊಂದು ಸಮಾರಂಭ ಮಾಡಿತ್ತು. ಕೇಂದ್ರ ಸಚಿವರು ತಮ್ಮ ಬಿಗಿಯಾದ ವೇಳಾಪಟ್ಟಿಯಲ್ಲೂ ಸಮಯ ಮಾಡಿಕೊಂಡು 2 ನಿಮಿಷ ಶಾಲೆಯಲ್ಲಿ ಇದ್ದಿದ್ದು ನನಗೆ ತುಂಬಾ ಸಂತೋಷ ತಂದಿದೆ ಎಂದು ಮೇಘಾ ಕೊಚಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ