ಬೆಂಗಳೂರು: ಮೇಯರ್ ಚುನಾವಣೆಗಳು ಮತ್ತೊಮ್ಮೆ ಬಂದಿದೆ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ (ಎಸ್) ಈಗಾಗಲೇ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ತಂತ್ರ ರೂಪಿಸುತ್ತಿವೆ. ಜೆಡಿಯು (ಎಸ್) ಕಾಂಗ್ರೆಸ್ನೊಂದಿಗೆ ಮಾಡಿಕೊಂಡಿದ್ದ ಮೈತ್ರಿಯಿಂದ ಹಿಂದೆಗೆಯುವ ಸಾಧ್ಯತೆ ಇದೆ. ಪ್ರಸ್ತುತ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್) ಮತ್ತು ಡೆಪ್ಯುಟಿ ಮೇಯರ್ ಆನಂದ್ (ಜೆಡಿ-ಎಸ್) ಆಡಳಿತ ಅವಧಿ ಮುಂದಿನ ತಿಂಗಳು ಕೊನೆಗೊಳ್ಳುತ್ತದೆ.
ಈ ವರ್ಷ ಮೇಯರ್ ಹುದ್ದೆಯನ್ನು ಎಸ್ಸಿ ವಿಭಾಗಕ್ಕೆ ಮೀಸಲಿಡಲಾಗಿದೆ ಮತ್ತು ಉಪ ಮೇಯರ್ ಹುದ್ದೆಯನ್ನು ಜನರಲ್ (ಮಹಿಳೆ) ಗಾಗಿ ಕಾಯ್ದಿರಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಲ್ಲಿ ಮೇಯರ್ ಸ್ಥಾನಕ್ಕಾಗಿ ವಿಭಿನ್ನ ಪಕ್ಷಗಳ ಆಕಾಂಕ್ಷಿಗಳು ಈಗಾಗಲೇ ಲಾಬಿ ಪ್ರಾರಂಭಿಸಿದ್ದಾರೆ.
ಕಾಂಗ್ರೆಸ್ ಮೇಯರ್ ಹುದ್ದೆಯನ್ನು ತನ್ನಲ್ಲೇ ಉಳಿಸಿಕೊಳ್ಳವ ಭರವಸೆ ಇಟ್ಟುಕೊಂಡಿದೆ. ಆದರೆ ಅದರ ಪಾಲುದಾರ ಪಕ್ಕ್ಷವಾದ ಜೆಡಿ(ಎಸ್) ತಾನು ಕಾಂಗ್ರೆಸ್ ನೊಂದಿಗಿನ ಮೈತ್ರಿಯಿಂದ ಹೊರ ಬರುವುದಾಗಿ ಬೆದರಿಕೆ ಹಾಕುತ್ತಲಿದೆ. ಹಾಗೇನಾದರೂ ಆದರೆ ಬಿಬಿಎಂಪಿ ಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಲಾಭವಾಗುವುದು ಖಚಿತ.
2015 ರ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗೆದ್ದಿದೆ (ಒಬ್ಬ ಸ್ವತಂತ್ರ ಅಭ್ಯರ್ಥಿ ಕೂಡ ಬಿಜೆಪಿಗೆ ಬೆಂಬಲವನ್ನು ನೀಡಿದ್ದಾರೆ), ಕಾಂಗ್ರೆಸ್ 76, ಜೆಡಿಎಸ್ ಗೆ 14 ಸ್ಥಾನ ಮತ್ತು ಸ್ವತಂತ್ರ ಅಭ್ಯರ್ಥಿಗಳು 7 ಸ್ಥಾನಗಳನ್ನು ಗೆದ್ದಿದ್ದಾರೆ. ಎಂಎಲ್ಎ, ಎಮ್ಎಲ್ಸಿಗಳು ಮತ್ತು ಸಂಸದರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರವನ್ನು ಹೊಂದಿದ್ದು, ಜೆಡಿಎಸ್ (ಎಸ್) ಸಹಾಯದಿಂದ ಉನ್ನತ ಸ್ಥಾನ ಪಡೆದುಕೊಳ್ಳಲು ಕಳೆದ ಸಾಲಿನಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.
ಜೆಡಿ (ಎಸ್) ವಕ್ತಾರ ರಮೇಶ್ ಬಾಬು ಅವರು ಮೇಯರ್ ಚುನಾವಣೆ ನಂತರ ಕಾಂಗ್ರೆಸ್ ಮೈತ್ರಿ, ಜೆಡಿ (ಎಸ್) ಸದಸ್ಯರಿಗೆ ಉತ್ತಮ ಸ್ಥಾನ ಮಾನ ನೀಡಲಿಲ್ಲ ಎಂದು ಹೇಳಿದರು. "ಕಳೆದ ಎರಡು ವರ್ಷಗಳಿಂದ, ನಾವು ಕಾಂಗ್ರೆಸ್ ಮೇಯರ್ ಗೆ ಮತ ಹಾಕಿದ್ದೇವೆ, ಆದರೆ ಈ ಸಮಯದಲ್ಲಿ, ನಾವು ನಮ್ಮ ಸ್ವಂತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ನಾವು ಇದನ್ನು ಶೀಘ್ರದಲ್ಲೇ ಬಹಿರಂಗ ಪಡಿಸಲಿದ್ದೇವೆ" ಎಂದು ಅವರು ಹೇಳಿದರು.
ಇತ್ತೀಚೆಗೆ, ಜೆಡಿ (ಎಸ್) ರಾಜ್ಯ ಅಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರು ಬಿಬಿಎಂಪಿ ದೈನಂದಿನ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ಜೆಡಿಯು (ಎಸ್) ಮೇಯರ್ ಹುದ್ದೆಗೆ ಬೇಡಿಕೆ ಇಡಲಿದೆ.
ಆದಾಗ್ಯೂ, ಹಿರಿಯ ಕಾಂಗ್ರೆಸ್ ಕೌನ್ಸಿಲರ್ ಆರ್. ಎಸ್. ಸತ್ಯನಾರಾಯಣ ಅವರು
ಜೆಡಿ (ಎಸ್) ಸದಸ್ಯರು ಉಪ ಮೇಯರ್ ಹುದ್ದೆಯಲ್ಲಿ ಉಳಿಯಲು ಮನವೊಲಿಸಬಹುದು ಎಂದು ಹೇಳಿದರು. "ಅವರ ಸಂಖ್ಯೆ ಕಡಿಮೆ ಇದೆ. ಇದೇ ವ್ಯವಸ್ಥೆಯು ಮೂರನೇ ವರ್ಷಕ್ಕೂ ಮುಂದುವರಿಯುತ್ತದೆ. ಮೇಯರ್ ಕಾಂಗ್ರೆಸ್ ಮತ್ತು ಉಪ ಮೇಯರ್ ಜೆಡಿ (ಎಸ್) ಯಿಂದ ಆಯ್ಕೆ ಆಗಲಿದ್ದಾರೆ" ಎಂದು ಅವರು ಹೇಳಿದರು.
ಮೇಯರ್ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿಗಳೆಂದರೆ ದೇವರಜೀವನ ಹಳ್ಳಿ ವಾರ್ಡ್ ನ ಸಂಪತ್ ರಾಜ್ ಮತ್ತು ಸುಭಾಷ್ ನಗರ ವಾರ್ಡ್ ನ ಗೋವಿಂದರಾಜು, ಇಬ್ಬರೂ ಹಿರಿಯ ಕೌನ್ಸಿಲರ್ ಗಳು. "ಹುದ್ದೆಗೆ ಸರಿಹೊಂದುವ ಅನೇಕ ಕೌನ್ಸಿಲರ್ಗಳು ಇದ್ದಾರೆ, ಆದರೆ ನಾವು ಹಿರಿಯ ಮತ್ತು ಅನುಭವಿ ಯಾರಾದರೊಬ್ಬರನ್ನು ಹುಡುಕುತ್ತಿದ್ದೇವೆ. ಇದು ಚುನಾವಣೆ ವರ್ಷವಾದ ಕಾರಣ ನಿರ್ಣಾಯಕವಾಗಿದೆ, "ಎಂದು ಸತ್ಯನಾರಾಯಣ ಹೇಳಿದರು.
ಕಳೆದ 30 ವರ್ಷಗಳಿಂದ ಸಂಪತ್ ರಾಜ್ ಕಾಂಗ್ರೆಸ್ ನಲ್ಲಿದ್ದು ಮೇಯರ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಗೋವಿಂದರಾಜು ಅವರು 2015 ರಲ್ಲಿ ಕಾಂಗ್ರೆಸ್ ಗೆ ಸೇರಿಕೊಂಡವರು (ಕಳೆದ ಎರಡು ಅವಧಿಗಳಲ್ಲಿ ಅವರು ಜೆಡಿ(ಎಸ್) ನಲ್ಲಿ ಇದ್ದರು).