ಮುಂಬೈ: ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರ ಪತ್ನಿಯಿಂದಲೇ ಕೊಲೆಗೀಡಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಕುಟುಂಬ ಕಲಹದಿಂದಾಗಿ ಪತ್ನಿ ಅಮಿತಾ ಏಳು ಬಾರಿ ಚಾಕುವಿನಿಂದ ಇರಿದು 52 ವರ್ಷದ ಅಪೈಯ್ಯ ಅವರನ್ನು ಕೊಲೆಮಾಡಿದ್ದಾರೆ. ನಂತರ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲಾಡದ ಕಚ್‌ಪಡ ಪ್ರದೇಶದಲ್ಲಿರುವ ಫ್ಲ್ಯಾಟ್‌ನ 27 ನೇ ಮಹಡಿಯಲ್ಲಿ ಘಟನೆ ನಡೆದಿದ್ದು ಮೃತ ಅಪೈಯ್ಯ ಗೆ 23 ವರ್ಷದ ಮಗ ಗಣಪತಿ, 15 ವರ್ಷದ ಮಗಳು ಇದ್ದರು. ಆದರೆ ಘಟನೆ ವೇಳೆ ಅವರಾರೂ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ದಂಪತಿಗಳು ಮದ್ಯಪಾನ ಮಾಡುವ ವೇಳೆ ಯಾವುದೋ ವಿಷಯಕ್ಕೆ ದಂಪತಿಗಳಿಬ್ಬರು ವಾದ ಪ್ರಾರಂಭಿಸಿದ್ದಾರೆ. ಇದು ವಿಕೋಪಕ್ಕೆ ಹೋಗಿ ಕೋಪಗೊಂಡ ಅಮಿತಾ ಅಡುಗೆ ಮನೆಗೆ ತೆರಳಿ, ಚಾಕು ತಂದು ಗಂಡನಿಗೆ ಏಳು ಬಾರಿ ಇರಿದು ಕೊಲೆಮಾಡಿ ನಂತರ ತಾನು ಇರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಲಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಮಿತ ಆರೋಗ್ಯ ಸುಧಾರಿಸಿದ ಬಳಿಕ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
ಅಮಿತಾ ಅವರು ಅಪೈಯ್ಯ ಎರಡನೇ ಪತ್ನಿ ಎಂದು ತಿಳಿದು ಬಂದಿದೆ.
ಅಪೈಯ್ಯ ಚೆನಂದ್ ಏರ್ ಇಂಡಿಯಾ ಪರ ಆಟವಾಡಿದ್ದಾರೆ. ಟಾಟಾ ಮತ್ತು ಬಾಂಬೆ ಹಾಕಿ ತಂಡಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics