ರಾಜ್ಯ

ಕೈದಿ ಶಶಿಕಲಾ ಜೈಲಿನಿಂದ ಹೊರ ಹೋಗಿದ್ದ ಸಿಸಿಟಿವಿ ದೃಶ್ಯಾವಳಿ ಬಹಿರಂಗ!

Srinivasamurthy VN

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಐಪಿಎಸ್ ಅಧಿಕಾರಿ ರೂಪಾ ಅವರ ಹೇಳಿಕೆಗೆ ಇಂಬು ನೀಡುವಂತೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೈಲ ಶಿಕ್ಷೆಗೆ ಗುರಿಯಾಗಿರುವ ವಿಕೆ ಶಶಿಕಲಾ  ಜೈಲಿನಿಂದ ಹೊರ ಹೋಗಿ ಮತ್ತೆ ಜೈಲಿಗೆ ವಾಪಸ್ ಆಗಿರುವ ದೃಶ್ಯಾವಳಿ ಬಹಿರಂಗವಾಗಿದೆ.

ಈ ಬಗ್ಗೆ ಸ್ವತಃ ಡಿಐಜಿ ರೂಪಾ ಅವರು ಎಸಿಬಿ ಪೊಲೀಸರಿಗೆ ಹಸ್ತಾಂತರಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಶಿಕಲಾ ಮತ್ತು ಇಳವರಸಿ ಬ್ಯಾಗ್​ಹಿಡಿದು ಸಾಮಾನ್ಯ ವಸ್ತ್ರದಲ್ಲಿ ಜೈಳಿನ ಒಳಗೆ ಪ್ರವೇಶಿಸುತ್ತಿರುವ ದೃಶ್ಯಗಳು  ಸೆರೆಯಾಗಿವೆ.

SCROLL FOR NEXT