ಆಲದ ಮರವನ್ನು ಮರು ನೆಟ್ಟ ದೃಶ್ಯ 
ರಾಜ್ಯ

ಬೇರು ಸಹಿತ ಕಿತ್ತ ಆಲದ ಮರವನ್ನು ಮರು ನೆಟ್ಟ ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆ

50 ವರ್ಷಗಳ ಹಿಂದಿನ ಆಲದ ಮರ ಇತ್ತೀಚಿನ ಭಾರೀ ಮಳೆಗೆ ಉಡುಪಿಯ ಬನ್ನಂಜೆ ಬಳಿ ಬುಡ ಸಮೇತ...

ಉಡುಪಿ: 50 ವರ್ಷಗಳ ಹಿಂದಿನ ಆಲದ ಮರ ಇತ್ತೀಚಿನ ಭಾರೀ ಮಳೆಗೆ ಉಡುಪಿಯ ಬನ್ನಂಜೆ ಬಳಿ ಬುಡ ಸಮೇತ ಬಿದ್ದಿತ್ತು. ಅದನ್ನು ಮಣಿಪಾಲ ತಾಂತ್ರಿಕ ಸಂಸ್ಥೆಯ ಆವರಣದಲ್ಲಿ ಮತ್ತೆ ನೆಡಲಾಗಿದೆ. 
ಸಂಸ್ಥೆಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಅವರ ಯೋಜನೆಯಂತೆ ಬನ್ನಂಜೆಯಿಂದ 9 ಕಿಲೋ ಮೀಟರ್ ದೂರದಲ್ಲಿರುವ ಆಲದ ಮರದ ಬುಡವನ್ನು ಕ್ರೇನ್ ಸಹಾಯದಿಂದ ಎತ್ತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೆಡಲಾಗಿದೆ. ಉಡುಪಿ ಅರಣ್ಯಾಧಿಕಾರಿ ಕ್ಲಿಫೊರ್ಡ್ ಲೊಬೊ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಮರದ ಸಾಗಾಟಕ್ಕೆ ಅನುವು ಮಾಡಿಕೊಡಲು ಅದನ್ನು ಅಲ್ಲಲ್ಲಿ ಕತ್ತರಿಸಲಾಯಿತು.
ಮರದ ಬೇರನ್ನು ನೆಡಲು ಮೊದಲೇ ಗುಂಡಿ ತೋಡಿ ಇಡಲಾಗಿತ್ತು. ಮರವನ್ನು ಕ್ರೇನ್ ನಲ್ಲಿ ತಂದು ಕ್ಯಾಂಪಸ್ ಆವರಣದಲ್ಲಿ ನೆಡುವವರೆಗಿನ ದೃಶ್ಯ ನಿಜಕ್ಕೂ ಸೊಬಗಾಗಿತ್ತು. ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?