ರಾಜ್ಯ

ಶೀಘ್ರವೇ ಎಲೆಕ್ಟ್ರಿಕ್ ವಾಹನ ನೀತಿ ಪ್ರಕಟಿಸಲಿರುವ ರಾಜ್ಯ ಸರ್ಕಾರ

Srinivas Rao BV
ಬೆಂಗಳೂರು: ರಾಜ್ಯವನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿಸುವ ಉದ್ದೇಶದಿಂದ ಶೀಘ್ರವೇ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಇಂದು ಅನೇಕ ದೇಶಗಳಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನೆ ಹೆಚ್ಚು ಬಳಕೆ ಮಾಡಲಾಗುತ್ತಿದೆ. ವಿದ್ಯುತ್ ಚಾಲಿತ ವಾಹನಗಳು ಭವಿಷ್ಯದ ವಾಹನಗಳಾಗಿವೆ. ಆದರೆ ಬ್ಯಾಟರಿ ದರದಿಂದ ವಿದ್ಯುತ್ ಚಾಲಿತ ವಾಹನಗಳ ಬೆಲೆಯೂ ಅಧಿಕವಾಗಿದೆ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ. 
ಕರ್ನಾಟಕವನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿಸುವ ಉದ್ದೇಶದಿಂದ ಶೀಘ್ರವೇ ಎಲೆಕ್ಟ್ರಿಕ್ ವಾಹನ, ಎನರ್ಜಿ ಸ್ಟೋರೇಜ್ ನೀತಿ ಪ್ರಕಟಿಸಲಿದ್ದೇವೆ, ಇದರಿಂದಾಗಿ ಭವಿಷ್ಯದ ಕ್ಷೇತ್ರದತ್ತ ಹೆಚ್ಚಿನ ಹೂಡಿಕೆ ಆಕರ್ಷಣೆ ಮಾಡಲು ಸಾಧ್ಯವಾಗಲಿದ್ದು ಎಲೆಕ್ಟ್ರಿಕ್ ವಾಹನ ನೀತಿ ಪ್ರಕಟಿಸಲಿರುವ ಮೊದಲ ರಾಜ್ಯವಾಗಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. 
SCROLL FOR NEXT